ಚಿಕ್ಕಮಗಳೂರು: ಆಟವಾಡುವ ಗನ್ ಎಂದು ಭಾವಿಸಿ ಏರ್ ಗನ್ ಇಟ್ಟುಕೊಂಡು ಆಡುವಾಗ ಬಾಲಕ ಟ್ರಿಗರ್ ಒತ್ತಿದ್ದು, ತನ್ನ ಎದೆಗೇ ಸ್ವಯಂ ಸಿಡಿಸಿಕೊಂಡು ಬಾಲಕ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿ-ಪಿಕ್ಕಿ ತಾಂಡಾದಲ್ಲಿ ಘಟನೆ ನಡೆದಿದೆ. ವಿಷ್ಣು ರಾಜ್ (8) ಮೃತ ಬಾಲಕ.
ಏರ್ ಗನ್ ಮಿಸ್ ಫೈರ್ ಆಗಿದ್ದು, ಬಾಲಕನ ಎದೆಯ ಭಾಗಕ್ಕೆ ಗುಂಡು ಸಿಡಿದಿದೆ.
ಬಾಲಕನ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದೇಹ ರವಾನೆ ಮಾಡಲಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.