ದಕ್ಷಿಣ ಕನ್ನಡ ಜಿಲ್ಲೆ ಜನರ ರಕ್ತದ ಬಣ್ಣ ಕೇಸರಿ: ಮಾಳವಿಕಾ ಅವಿನಾಶ್

Prasthutha|

- Advertisement -

ಮಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅದರ ಕಾವು ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದ ಬಣ್ಣ ಕೇಸರಿ, ಕುಯ್ದ್ರೆ ಬರೋದು ಕೆಂಪು ರಕ್ತ ಅಲ್ಲ, ಕೇಸರಿ ಬಣ್ಣದ ರಕ್ತ ಎಂದು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.

ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ‘ 28ಕ್ಕೆ 28 ಕ್ಷೇತ್ರ ಗೆಲ್ಲುವ ಸವಾಲು ನಮ್ಮ‌ ಮುಂದಿದೆ ಎಂದರು.

- Advertisement -

ಬ್ರಿಜೇಶ್ ಚೌಟ ಅಭ್ಯರ್ಥಿ ಅಲ್ಲ, ನನ್ನ ಲೆಕ್ಕದಲ್ಲಿ ಅವರು ಲೋಕಸಭಾ ಸದಸ್ಯ. ಜೊತೆಗೆ ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ, ಎಷ್ಟು ಅಂತರದಲ್ಲಿ ಗೆಲ್ಲಿಸುತ್ತೇವೆ ಎಂಬ ಸವಾಲು ನಮ್ಮ ಮುಂದಿದೆ ಎಂದರು.



Join Whatsapp