ಬೈಕಿ ಡಿಕ್ಕಿ ಹೊಡೆದು ಹಾರಿ ಪಲ್ಟಿಯಾದ ಇನ್ನೋವಾ ಕಾರು: ಐವರು ಮೃತ್ಯು

Prasthutha|

ಚತುಷ್ಪಥ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಇನೋವಾ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದ್ದು, ಬಳಿಕ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿಕೊಂಡು ಪಲ್ಟಿಯಾಗಿ ಬಿದ್ದಿರುವ ಭೀಕರ ಅಪಘಾತ ನಡೆದಿದೆ. ಬೈಕ್ ಸವಾರ ಸೇರಿ ಐವರು ಮೃತರಾಗಿದ್ದಾರೆ. ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -

ಕಾರಿನಲ್ಲಿದ್ದ ಐವರು ಪ್ರಯಾಣಿಕರಿದ್ದರು. ನಾಲ್ವರು ಮೃತಪಟ್ಟಿದ್ದಾರೆ. ಬೈಕ್ ಸವಾರ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಮೃತರನ್ನು ಕನಗವೇಲ್ ಹಾಗೂ ಆತನ ಪತ್ನಿ ಕೃಷ್ಣಕುಮಾರಿ, ಸಂಬಂಧಿ ನಾಗಜ್ಯೋತಿ, 8 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೋ‌ ಬೆಚ್ಚಿಬೀಳಿಸುತ್ತಿದೆ.



Join Whatsapp