ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಪುತ್ರ ಲೋಕ ಸಭಾ ಚುನಾವಣೆಯಲ್ಲೇ ಶ್ರೀಮಂತ ಅಭ್ಯರ್ಥಿ

Prasthutha|

ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 10 ಶ್ರೀಮಂತ ಲೊಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಪುತ್ರ ನಕುಲ್ ನಾಥ್ ಮೊದಲ ಸ್ಥಾನದಲ್ಲಿದ್ದಾರೆ.

- Advertisement -

ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಣೆಯ ಪ್ರಕಾರ, ಮಧ್ಯಪ್ರದೇಶದ ಚಿಂದ್ವಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಮಲನಾಥ್ ಅವರ ಪುತ್ರ ನಕುಲ್​ನಾಥ್ ಅವರು 717 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ ನಲ್ಲಿ ಸಲ್ಲಿಸಿದ್ದಾರೆ.

ಮಧ್ಯ ಪ್ರದೇಶದ ಏಕೈಕ ಕೈ ಸಂಸದರಾದ ನಕುಲ್ ನಾಥ್ ಮತ್ತೆ ಸ್ಪರ್ಧಿಸುತ್ತಿದ್ದಾರೆ.ಎಡಿಆರ್ ವರದಿ ಪ್ರಕಾರ, ನಾಥ್ ₹668,86,18,696 ಚರಾಸ್ತಿ ಮತ್ತು ₹48,07,86,443 ಸ್ಥಿರ ಆಸ್ತಿ ಹೊಂದಿದ್ದಾರೆ. 2019 ರಲ್ಲಿ, ನಕುಲ್ ಅವರು ಮಧ್ಯಪ್ರದೇಶದಿಂದ ಗೆದ್ದ ಏಕೈಕ ಕಾಂಗ್ರೆಸ್ ಲೋಕಸಭಾ ಸಂಸದರಾಗಿದ್ದರು, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.

- Advertisement -

ಆ ನಂತರ ತಮಿಳುನಾಡಿನ ಈರೋಡ್ ನಿಂದ ಸ್ಪರ್ಧಿಸಿರುವ ಎಐಎಡಿಎಂಕೆ ನಾಯಕ ಅಶೋಕ್ ಕುಮಾರ್ ಇದ್ದಾರೆ. 662 ಕೋಟಿ ರೂ. ಆಸ್ಥಿ ಘೋಷಿಸಿದ್ದಾರೆ. ತಮಿಳುನಾಡಿನ ಶಿವಗಂಗೆಯಿಂದ ಬಿಜೆಪಿ ಅಭ್ಯರ್ಥಿ ದೇವನಾಥನ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 304 ಕೋಟಿ ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದಾರೆ.



Join Whatsapp