ಬೆಂಗಳೂರು ಗ್ರಾಮಾಂತರ ಸೇರಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲು ಅನುಭವಿಸಲಿದೆ: ಡಿಕೆ ಶಿವಕುಮಾರ್

Prasthutha|

- Advertisement -

ಬೆಂಗಳೂರು: ರಾಜ್ಯದ ಒಕ್ಕಲಿಗರು ಕಾಂಗ್ರೆಸ್ ಕೈ ಬಿಡಲ್ಲ, ರೆಡ್ಡಿಗಳು ಸೇರಿ ಒಟ್ಟು 8 ಒಕ್ಕಲಿಗ ಮುಖಂಡರಿಗೆ ಟಿಕೆಟ್ ನೀಡಲಾಗಿದೆ ಮತ್ತು ಕೆಪಿಸಿಸಿ ಅಧ್ಯಕ್ಷನಾಗಿರುವ ತಾನೂ ಕೂಡ ಒಕ್ಕಲಿಗ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ದೇವೇಗೌಡರು ತಮ್ಮ ಅಳಿಯನಿಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶ ಕಂಡಿರಬಹುದು, ಆದರೆ ಜೆಡಿಎಸ್ ಪಕ್ಷವು ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲ 4 ಸೀಟುಗಳಲ್ಲಿ ಸೋಲು ಅನಭವಿಸಲಿರುವುದು ಖಚಿತ, ಇದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಶಿವಕುಮಾರ್ ಹೇಳಿದರು.



Join Whatsapp