ಮಕ್ಕಾ: ಸೌದಿ ಅರೇಬಿಯಾದಲ್ಲಿ ಬುಧವಾರದಂದು ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುವುದು ಎಂದು ಮಕ್ಕಾ ಹರಂನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಲಾಗಿದೆ. ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಕಾರಣ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಸೌದಿ ಅರೇಬಿಯಾದ ಸುದೈರ್‌ನಲ್ಲಿ ಮುಖ್ಯ ಖಗೋಳಶಾಸ್ತ್ರಜ್ಞ ಅಬ್ದುಲ್ಲಾ ಅಲ್-ಖುದೈರಿ ಸೌದಿಯ ರಾಯಭಾರಿಯೊಂದಿಗೆ ದೃಢೀಕರಿಸಿದ ಬಳಿಕ ಈ ಘೋಷಣೆ ಮಾಡಲಾಗಿದೆ.
ರಮಝಾನ್ ತಿಂಗಳು 11 ಮಾರ್ಚ್ 2024ರಂದು ಸೌದಿ ಅರೇಬಿಯಾದಲ್ಲಿ ಪ್ರಾರಂಭವಾಗಿತ್ತು.