ಇತರರ ಪತ್ನಿಯರ ಜಾತಕ ಹುಡುಕುವ ಯತ್ನಾಳ್ ಹೇಯ ಕೃತ್ಯಕ್ಕೆ ಇಳಿದಿದ್ದಾರೆ: ಕೆ.ಅಶ್ರಫ್

Prasthutha|

ಮಂಗಳೂರು: ಕರ್ನಾಟಕದ ಸಚಿವರ ಪತ್ನಿ ಮುಸ್ಲಿಮ್ ಎಂಬ ಕಾರಣಕ್ಕಾಗಿ ಅವರನ್ನು ಅರ್ಧ ಪಾಕಿಸ್ತಾನಿ ಎಂದು ಕೀಳು ಮಟ್ಟದಲ್ಲಿ ಅವಹೇಳನ ಗೈದ ಯತ್ನಾಳ್ ಇತರರ ಪತ್ನಿಯರ ಜಾತಕ ಹುಡುಕುವ ಹೇಯ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮಲ್ಲಿ ಜನತೆಗೆ ಪ್ರದರ್ಶಿಸಲು ಯಾವುದೇ ವಿಷಯವು ಇಲ್ಲದಾಗ ಬಿಜೆಪಿ ಶಾಸಕ  ಬಸವನ ಗೌಡ ಪಾಟೀಲ್ ಯತ್ನಾಳ್ ಗೆ ಲಭ್ಯವಾಗಿರುವ ವಿಷಯ ಇತರರ ಪತ್ನಿಯರ ಜಾತಕ ಹುಡುಕಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂರನೇ ದರ್ಜೆ ಪ್ರಚಾರ ಪ್ರಿಯತೆ.ಯತ್ನಾಳ್ ಗೆ ಸಾಧ್ಯವಿದ್ದರೆ ಬಿಜೆಪಿ ಪಕ್ಷದ ಬ್ರಷ್ಟಾಚಾರ ಬ್ರಹ್ಮಾಂಡತೆ, ತೆರಿಗೆ ಭಯೋತ್ಪಾದನೆ,ಗಡಿಯಲ್ಲಿ ಚೈನಾ ನುಸುಳುವಿಕೆ,ವಿರೋಧ ಪಕ್ಷದ ವಿರುದ್ಧದ ಅಕ್ರಮ ಕಾರ್ಯಾಚರಣೆ ಇತ್ಯಾದಿಗಳ ಬಗ್ಗೆ ಚರ್ಚಿಸಲೀ, ಬದಲಾಗಿ ಜನತೆಗೆ ಸಂಬಂಧವಿಲ್ಲದ ಇತರರ ಪತ್ನಿಯರ ಜಾತಕ ಹುಡುಕುವ ಕೆಲಸವನ್ನು ನಿಲ್ಲಿಸಲಿ.ಯತ್ನಾಳ್, ಕೇಂದ್ರದಲ್ಲಿನ ಹಾಲಿ ಮಾಜಿ ಸಚಿವರ ಕುಟುಂಬದಲ್ಲಿರುವ ಭಿನ್ನ ಧರ್ಮೀಯ ಪತ್ನಿ,ಸೊಸೆಯಂದಿರು,ಪತಿ, ಬಾವಂದಿರು ‘ ಪಾಕಿಸ್ತಾನಿಗಳು ‘ ಎಂದು ಪ್ರಸ್ತಾಪಿಸದಿರಲಿ.



Join Whatsapp