ಅಣ್ಣ ಹರ್ಷ ಬಿಜೆಪಿ ಸೇರಿದ್ದು ಆಶ್ಚರ್ಯ ತಂದಿಲ್ಲ: ಸಂಯುಕ್ತಾ ಪಾಟೀಲ್

Prasthutha|

ಬಾಗಲಕೋಟೆ: ತನ್ನ ಕಸಿನ್ ಹರ್ಷಗೌಡ ಪಾಟೀಲ್ ಬಿಜೆಪಿ ಸೇರಿದ್ದು ಜನರಿಗೆ ಮತ್ತು ಮಾಧ್ಯಮಗಳಿಗೆ ಹೊಸ ವಿಷಯ ಅನಿಸಬಹುದು ಆದರೆ ಅವರು ಬಹಳ ವರ್ಷಗಳಿಂದ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಹೇಳಿದರು.

- Advertisement -

ಈ ಬಗ್ಗೆ ಮಾತಾಡಿದ ಅವರು, ಅಣ್ಣ ಹರ್ಷಗೌಡ ಪಾಟೀಲ್ ಅವರು ಸೋಶಿಯಲ್ ಮೀಡಿಯ ಪೋಸ್ಟ್ ಗಳನ್ನು ನೋಡಿದರೆ ಗೊತ್ತಾಗುತ್ತದೆ. ಅವರು ಕೇವಲ ಬಿಜೆಪಿ ನಾಯಕರು ಮತ್ತು ಪಕ್ಷದ ಪರವಾದ ಪೋಸ್ಟರ್ ಗಳನ್ನು ಶೇರ್ ಮಾಡಿದ್ದಾರೆ, ಅವರು ಬಿಜೆಪಿ ಸೇರಿರುವುದು ತಮ್ಮ ಕುಟುಂಬಕ್ಕೆ ಆಸ್ಚರ್ಯವೇನೂ ತಂದಿಲ್ಲ, ಬಿಜೆಪಿ ನಾಯಕರ ಜೊತೆ ಒಡನಾಟವಿಟ್ಟುಕೊಂಡಿದ್ದು ಗೊತ್ತಿತ್ತು ಎಂದರು. ಕುಟುಂಬಕ್ಕಾಗಲಿ ಪಕ್ಷಕ್ಕಾಗಲಿ ಮುಜುಗುರ ಉಂಟಾಗುವ ಸ್ಥಿತಿಯೇನೂ ನಿರ್ಮಾಣವಾಗಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಮಗೆ ಇಷ್ಟವಾಗುವ ಪಕ್ಷವನ್ನು ಆಯ್ಕೆಮಾಡಿಕೊಳ್ಳುವ ಮತ್ತು ನಿಷ್ಠೆ ಪ್ರದರ್ಶಿಸುವ ಸ್ವಾತಂತ್ರ್ಯ ಮತ್ತು ಹಕ್ಕಿದೆ ಎಂದು ಹೇಳಿದರು.



Join Whatsapp