ಮೈದುನನ ಪರವಾಗಿ ಡಿಕೆ ಶಿವಕುಮಾರ್ ಪತ್ನಿ ಮತಯಾಚನೆ

Prasthutha|

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಡಿಕೆ ಸುರೇಶ್ ಪರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಪತ್ನಿ ಉಷಾ ಶಿವಕುಮಾರ್ ಶುಕ್ರವಾರ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು.

- Advertisement -

ಜೆಪಿ ಪಾರ್ಕ್ ಮತ್ತು ಸುಂದರ್ ನಗರದಲ್ಲಿ ಮೈದುನ, ಡಿ ಕೆ ಸುರೇಶ್ ಅವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಭಾರೀ ಪೈಪೋಟಿಯೇ ನಡೆಯಲಿದೆ ಕಾರಣ ಮೈತ್ರಿ ಅಭ್ಯರ್ಥಿಯಾಗಿ ಡಾ ಮಂಜುನಾಥ ಸ್ಪರ್ಧಿಸಿದ್ದಾರೆ. ಹೀಗಾಗಿ ಡಿಕೆ ಸುರೇಶ್ ಗೆಲ್ಲಲೇಬೇಕಾಗಿದೆ. ಅದಕ್ಕಾಗಿ ಡಿಸಿಎಂ ಶಿವಕುಮಾರ ಅವರ ಪತ್ನಿಯೇ ಪ್ರಚಾರಕ್ಕಿಳಿದಿದ್ದಾರೆ.

- Advertisement -

ರಣ ಬಿಸಲಿನ ನಡುವೆ ಬೆಂಬಲಿಗರೊಂದಿಗೆ ದಣಿವರಿಯದೆ ಡಿಸಿಎಂ ಪತ್ಮಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ್ದಾರೆ.



Join Whatsapp