ಅಂಗಡಿಗೆ ನುಗ್ಗಿದ ಕಾರು: ಹಲವಾರು ಮಂದಿಗೆ ಗಾಯ

Prasthutha|

ನವದೆಹಲಿ: ದೆಹಲಿಯ ರಾಜ್ ಪುರ್ ನಲ್ಲಿ ವೇಗವಾಗಿ ಬಂದ ಕಾರೊಂದು ಕಚೋರಿ ಅಂಗಡಿಯೊಂದಕ್ಕೆ ನುಗ್ಗಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

- Advertisement -


ಇದೀಗ ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಅದೃಷ್ಟವಶಾತ್ ಅಪಘಾತದಲ್ಲಿ ಸಾವು ಸಂಭವಿಸಿಲ್ಲ ಎನ್ನಲಾಗಿದೆ. ಕೆಲವು ಮಂದಿ ಗ್ರಾಹಕರು ಅಂಗಡಿಯಲ್ಲಿ ಕಚೋರಿ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಅತಿವೇಗದಿಂದ ಬಂದ ಕಾರು ಅಂಗಡಿಗೆ ನುಗ್ಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.

- Advertisement -



Join Whatsapp