‘ಇಂಡಿಯಾ’ ಅಣಕಿಸಿ ಜಾಹೀರಾತು: ಬಿಜೆಪಿ ವಿರುದ್ಧ ಮಹಿಳಾ ಸಂಘಟನೆಗಳ ಆಕ್ರೋಶ

Prasthutha|

ನವದೆಹಲಿ: ‘ಇಂಡಿಯಾ’ದ ನಾಯಕರನ್ನು ಅಣಕಿಸಿ ಬಿಜೆಪಿ ಬಿಡುಗಡೆ ಮಾಡಿದ ಜಾಹೀರಾತಿಗೆ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಜಾಹೀರಾತಿನಲ್ಲಿ ಮಹಿಳೆಯನ್ನು ಕೀಳಾಗಿ ಚಿತ್ರೀಕರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ.

- Advertisement -


ಜಾಹೀರಾತನ್ನು ಹಿಂಪಡೆಯುವಂತೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ, ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನ್ನಿ ರಾಜಾ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾ ತಿವಾರಿ, ಆಲ್ ಇಂಡಿಯಾ ಕೋ-ಆರ್ಡಿನೇಷನ್ ಆಫ್ ಡಬ್ಲ್ಯೂ–ಪಿಎಂಎಸ್–ಐಜೆಎಮ್–ಜಿನ ಪೂನಂ ಕೌಶಿಕ್ ಆಗ್ರಹಿಸಿದ್ದಾರೆ. ‘ಪ್ರಧಾನಿ ಅವರು ಪ್ರತಿಪಾದಿಸಿದ ‘ನಾರಿ ಶಕ್ತಿ’ ಎಂಬ ಮನುವಾದಿ ಪರಿಕಲ್ಪನೆಯು ಈ ಜಾಹೀರಾತಿನ ಮೂಲಕ ತನ್ನ ನಿಜ ಬಣ್ಣವನ್ನು ತೋರಿಸಿದೆ ಎಂದು ಹೇಳಿದ್ದಾರೆ.



Join Whatsapp