ಗುವಾಹಟಿ: ರವಿವಾರ ಸುರಿದ ಭಾರಿ ಮಳೆಗೆ ಈಶಾನ್ಯ ರಾಜ್ಯಗಳಲ್ಲಿ ಹಾನಿಯಾಗಿದೆ. ತೀವ್ರ ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಗುವಾಹಟಿಯ ಗೋಪಿನಾಥ್ ಬೊರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ಛಾವಣಿಯ ಒಂದು ಭಾಗ ಕುಸಿದಿದೆ.
ವಿಮಾನ ನಿಲ್ದಾಣ ಪ್ರಾಧಿಕಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಆರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ವರದಿಯಾಗಿದೆ.
ದೊಡ್ಡ ಮರವೊಂದು ಉರುಳಿಬಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಬಂಧಿಸಲಾಗಿದೆ.