ಎಐಎಂಐಎಂ ಜತೆಗೆ ಮೈತ್ರಿ ಕೂಟ ರಚಿಸಿಕೊಂಡ ಅಪ್ನಾ ದಳ(ಕೆ)

Prasthutha|

ಲಖನೌ: ವಿಪಕ್ಷಗಳ ‘ಇಂಡಿಯಾ’ ಕೂಟದಿಂದ ಹೊರಬಂದಿರುವ ಅಪ್ನಾ ದಳ (ಕೆ) , ಅಸಾದುದ್ದೀನ್ ಉವೈಸಿಯ ಎಐಎಂಐಎಂ ಜತೆಗೆ ಮೈತ್ರಿ ಕೂಟ ರಚಿಸಿಕೊಂಡಿದೆ. ಮೈತ್ರಿಗೆ ‘ಪಿಡಿಎಂ ನ್ಯಾಯ ಮೋರ್ಚಾ’ ಎನ್ನುವ ಹೊಸ ಹೆಸರಿಸಿದೆ.

- Advertisement -

ತಮ್ಮ ಪಕ್ಷವು ಸಮಾಜವಾದಿ ಪಕ್ಷದ ಮಿತ್ರಪಕ್ಷವಲ್ಲ ಎಂದು ಹೇಳಿದ ಅಪ್ನಾ ದಳ ಪಕ್ಷದ ನಾಯಕಿ ಪಲ್ಲವಿ ಪಟೇಲ್, ಮೈತ್ರಿ ಮುರಿದುಬೀಳಲು ಅಖಿಲೇಶ್ ಯಾದವ್ ಕಾರಣ ಎಂದು ಆರೋಪಿಸಿದರು. ಕಾಂಗ್ರೆಸ್ ಕೂಡ ತಮ್ಮ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲಿಲ್ಲ ಎಂದು ದೂರಿದ್ದಾರೆ.

ಉತ್ತರ ಪ್ರದೇಶದ ಜನ ‘ಪಿಡಿಎಂ ನ್ಯಾಯ ಮೋರ್ಚಾ’ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಒವೈಸಿ, ತಮ್ಮ ಹೋರಾಟವು ಲೋಕಸಭಾ ಚುನಾವಣೆಯ ನಂತರವೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.



Join Whatsapp