ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ, ಕಾಂಗ್ರೆಸ್ ಗೆಲ್ಲುವುದು ಮುಖ್ಯ: ಕೆ.ಹೆಚ್. ಮುನಿಯಪ್ಪ

Prasthutha|

ಬೆಂಗಳೂರು: ಅಳಿಯನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಯಾವುದೇ ರೀತಿಯ ಬೇಸರವಿಲ್ಲ. ಕಾಂಗ್ರೆಸ್ ಗೆಲ್ಲುವುದು ನನಗೆ ಮುಖ್ಯ. ನಾವೆಲ್ಲರೂ ಕೆ‌ವಿ ಗೌತಮ್ ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಬಾರಿ ಸಂಸದನಾಗಿ, 10 ವರ್ಷ ಕೇಂದ್ರ ಮಂತ್ರಿಯಾಗಿ, CWC ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಲೋಕಸಭೆಯಲ್ಲಿ ಸೋತ ನಂತರ ಪಕ್ಷ ನನ್ನನ್ನು ಶಾಸಕನಾಗಿ ಮಂತ್ರಿಯಾಗಿ ಮಾಡಿದೆ ಎಂದು ಹೇಳಿದ್ದಾರೆ.

ನಮ್ಮ ಹೆಸರನ್ನೇ ಫೈನಲ್ ಮಾಡಲಾಗಿತ್ತು.ಆದರೆ, ಒಮ್ಮತ ಬಾರದ ಕಾರಣ ಗೌತಮ್ ಗೆ ಟಿಕೆಟ್ ನೀಡಲಾಗಿದೆ. ನಮಗೆ ಟಿಕೆಟ್ ತಪ್ಪಿಸಿದವರ ಬಗ್ಗೆ ಮಾತನಾಡುವುದು ಬೇಡ. ನಾವೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

- Advertisement -

ನಿನ್ನೆಯಷ್ಟೇ ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಸಲ್ಟ್​​ ಓರಿಯಂಟೆಡ್​​ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಪುನರುಚ್ಚರಿಸಿದ್ದರು.



Join Whatsapp