ಬುದೌನ್: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದು, ಮಹಿಳೆ ಮತ್ತು ಮಗು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬುದೌನ್ ನಲ್ಲಿ ನಡೆದಿದೆ.
ಸಂಜು ಮತ್ತು ಅಜಯ್ ಅವರಿದ್ದ ಮೋಟಾರ್ಬೈಕ್ ಪ್ರಮೋದ್, ಅವರ ಪತ್ನಿ ಗೀತಾ ಹಾಗೂ ಒಂದೂವರೆ ವರ್ಷದ ಮೊಮ್ಮಗಳು ಆಶಿ ಅವರನ್ನು ಕರೆದೊಯ್ಯುತ್ತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಸಂಜು, ಅಜಯ್ ಮತ್ತು ಪ್ರಮೋದ್ ಮೃತಪಟ್ಟಿದ್ದಾರೆ. ಗೀತಾ ಮತ್ತು ಆಶಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.