ಡಾ| ನಫಿಸತ್‌ ಪಿ. ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ| ಶಶಿಪ್ರಭಾ ಸಂಶೋಧನೆಗೆ ಪ್ರತಿಷ್ಠಿತ ಅಮೆರಿಕದ ಪೇಟೆಂಟ್‌

Prasthutha|

ಬೆಳ್ತಂಗಡಿ: ಉಜಿರೆ ಎಸ್‌.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ನೆಫಿಸತ್‌ ಪಿ. ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ| ಶಶಿಪ್ರಭಾ ಅವರ ಸಂಶೋಧನೆಗೆ ಪ್ರತಿಷ್ಠಿತ ಅಮೆರಿಕದ ಪೇಟೆಂಟ್‌ ಲಭಿಸಿದೆ. ಈ ಮೂಲಕ ಪ್ರಥಮ ಬಾರಿಗೆ ಎಸ್‌.ಡಿ.ಎಂ. ಕಾಲೇಜಿಗೆ ಅಮೆರಿಕದ ಪೇಟೆಂಟ್‌ ಮನ್ನಣೆ ದೊರಕಿದೆ. ಎಸ್‌.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರದ ಸಂಶೋಧನ ಪ್ರಯೋಗಾಲಯದಲ್ಲಿಯೇ ಈ ಇಬ್ಬರು ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.

- Advertisement -

ಹಿಂದೆ ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ನಾರಾಯಣ ಹೆಬ್ಟಾರ್‌ ವಿದೇಶದ ಪೇಟೆಂಟ್ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸಂಶೋಧನೆಗೆ ಆಸ್ಟ್ರೇಲಿಯದ ಪೇಟೆಂಟ್‌ ಲಭಿಸಿತ್ತು. ಆದರೆ ಉಳಿದೆಲ್ಲ ದೇಶಗಳ ಪೇಟೆಂಟ್‌ಗಿಂತ ಅಮೆರಿಕದ ಪೇಟೆಂಟ್‌ಗೆ ವಿಶೇಷ ವಿಶ್ವಮಾನ್ಯತೆ ಇದೆ.

- Advertisement -

ಸೌದಿ ಅರೇಬಿಯಾದ ಕಿಂಗ್‌ ಫೈಸಲ್‌ ವಿ.ವಿ. ಸಹಭಾಗಿತ್ವದೊಂದಿಗೆ ಕೈಗೊಳ್ಳಲಾಗಿದ್ದ ಸಂಶೋಧನೆಗೆ ಲಭಿಸಿದ ಪೇಟೆಂಟ್‌ನ ರಕ್ಷಣೆ 20 ವರ್ಷಗಳದ್ದಾಗಿದೆ. ಈ ನಿರ್ದಿಷ್ಟ ಸಂಶೋಧನ ಫಲಿತಗಳ ಆಧಾರದ ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯವು ಈ ಇಬ್ಬರು ಪ್ರಾಧ್ಯಾಪಕರದ್ದಾಗಿರುತ್ತದೆ.



Join Whatsapp