ರಾಜ್ಯಪಾಲ, ರಾಷ್ಟ್ರಪತಿ ವಿರುದ್ಧ ಸುಪ್ರೀಂಗೆ ದೂರು ನೀಡಿದ ಕೇರಳ

Prasthutha|

ನವದೆಹಲಿ: ವಿಧಾನಸಭೆಯಿಂದ ಅನುಮೋದನೆಗೊಂಡ 4 ಮಸೂದೆಗಳನ್ನು ಯಾವುದೇ ಕಾರಣ ನೀಡದೇ ರಾಷ್ಟ್ರಪತಿಗಳು ತಡೆಹಿಡಿದಿರುವುದಕ್ಕೆ ಮತ್ತು 2 ವರ್ಷಗಳಿಂದ 7 ಮಸೂದೆಗಳನ್ನು ರಾಜ್ಯಪಾಲರು ತಮ್ಮಲ್ಲೇ ಬಾಕಿ ಉಳಿಸಿಕೊಂಡು ಬಳಿಕ ರಾಷ್ಟ್ರಪತಿಗಳಿಗೆ ಕಳುಹಿಸಿರುವುದರ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್‌‌ಗೆ ದೂರು ನೀಡಿದೆ. ಸಂವಿಧಾನದ 32ನೇ ವಿಧಿಯಡಿ ಕೇರಳ ರಿಟ್‌ ಅರ್ಜಿ ಸಲ್ಲಿಸಿದೆ.

- Advertisement -

ದೂರಿನಲ್ಲೇನಿದೆ?

7 ಮಸೂದೆಗಳ 4 ಮಸೂದೆ ತಡೆಹಿಡಿದಿದ್ದಕ್ಕೆ ರಾಷ್ಟ್ರಪತಿ ಯಾವುದೇ ಕಾರಣ ನೀಡಿಲ್ಲ.

- Advertisement -

ಇದು ಸಂವಿಧಾನದ 14ನೇ ವಿಧಿ, 200ನೇ ವಿಧಿ ಮತ್ತು 201ನೇ ವಿಧಿಯ ಉಲ್ಲಂಘನೆ

ರಾಜ್ಯಪಾಲರು 2 ವರ್ಷಗಳಿಂದ ಮಸೂದೆಗಳನ್ನು ಬಾಕಿ ಇರಿಸಿಕೊಂಡಿದ್ದಾರೆ.

ಇದರಿಂದಾಗಿ ರಾಜ್ಯ ಶಾಸಕಾಂಗದ ಕಾರ್ಯ ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿದಂತಾಗಿದೆ.



Join Whatsapp