ಮಂಗಳೂರು | ಭೀಕರ ಕಾರು ಅಪಘಾತ: ಯುವಕ ಮೃತ್ಯು

Prasthutha|

ಮಂಗಳೂರು: ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಗರದ ಪಂಪ್ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮುಂಜಾನೆ ಸಂಭವಿಸಿದೆ.

- Advertisement -


ತೊಕ್ಕೊಟ್ಟು ನಿವಾಸಿ ಸಮಿತ್ ಶೆಟ್ಟಿ (30) ಮೃತಪಟ್ಟ ಯುವಕ. ಸಮಿತ್ ಶೆಟ್ಟಿ ಕೊಟ್ಟಾರದಲ್ಲಿರುವ ತನ್ನ ರೂಮ್ ನಿಂದ ಇಂದು ಬೆಳಗ್ಗೆ ಸುಮಾರು 6:15ರ ವೇಳೆಗೆ ತೊಕ್ಕೊಟ್ಟಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.


ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ.



Join Whatsapp