ರಷ್ಯಾದ ಕನ್ಸರ್ಟ್ ಹಾಲ್ ದಾಳಿ: 60ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ

Prasthutha|

ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ನಾಲ್ಕೈದು ಮಂದಿ ಭಯೋತ್ಪಾದಕರು ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
100ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವುದಾಗಿದೆ.

- Advertisement -


ಬಂದೂಕು ದಾಳಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡ ಧಗಧಗಿಸಿ ಹೊತ್ತಿ ಉರಿದಿದೆ. ವಿಶಾಲವಾದ ಸಭಾಂಗಣದಲ್ಲಿ ಗುಂಡಿನ ಸುರಿಮಳೆ ಪ್ರಾರಂಭವಾದಾಗ ಜನರು ಒಟ್ಟಿಗೆ ಸೇರಿಕೊಳ್ಳುವುದು, ಕಿರುಚುವುದು, ಆಸನದ ಹಿಂದೆ ಅವಿತುಕೊಳ್ಳುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಸ್ತ್ರ ಸಜ್ಜಿತ ವ್ಯಕ್ತಿಗಳು ಸ್ವಯಂ ಚಾಲಿತ ಬಂದೂಕುಗಳಿಂದ ದಾಳಿ ನಡೆಸಿದ್ದು, ಗ್ರೇನೆಡ್ ಅಥವಾ ಬಾಂಬ್ ಕೂಡಾ ಎಸೆದಿದ್ದಾರೆ. ಬಳಿಕ ಅವರು ಬಿಳಿ ಬಣ್ಣದ ರೆನಾಲ್ಟ್ ಕಾರಿನಲ್ಲಿ ಓಡಿ ಹೋಗಿರುವುದಾಗಿ ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ RIA ನೊವೊಸ್ಟಿ ವರದಿ ಮಾಡಿದೆ.

ರಷ್ಯಾದ ಇತಿಹಾಸದಲ್ಲಿ ಎರಡು ದಶಕಗಳಲ್ಲೇ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದೊಂದು ಬೃಹತ್ ಭಯೋತ್ಪಾದಕ ದಾಳಿ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೋಬಯಾನಿನ್ ಹೇಳಿಕೆ ನೀಡಿದ್ದಾರೆ.

- Advertisement -



Join Whatsapp