ಬಿಜೆಪಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು: ಅನ್ವರ್ ಸಾದತ್ ಬಜತ್ತೂರು

Prasthutha|

ದೆಹಲಿ‌ ಸಿಎಂ ಕೇಜ್ರಿವಾಲ್ ಬಂಧನಕ್ಕೆ SDPI ನಾಯಕ ಪ್ರತಿಕ್ರಿಯೆ

- Advertisement -

ಮಂಗಳೂರು: ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿಕೊಂಡು ‘ಪ್ರತಿಪಕ್ಷ ಮುಕ್ತ’ ಮಾಡಲು ಯಾವುದೇ ಹಂತಕ್ಕೂ ಇಳಿಯಲು ಹೇಸಲ್ಲ ಎಂಬುದಕ್ಕೆ ದೆಹಲಿ ಸಿ.ಎಂ. ಕೇಜ್ರಿವಾಲ್ ಬಂಧನ ಮತ್ತು ಕಾಂಗ್ರೆಸ್‌ನ ಬ್ಯಾಂಕ್ ಖಾತೆ ಫ್ರೀಝ್ ಮಾಡಿದ ಪ್ರಕರಣಗಳೇ ತಾಜಾ ನಿದರ್ಶನವಾಗಿದೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಉಳಿಯಬೇಕಾದರೆ ಫ್ಯಾಸಿಸ್ಟ್ ಸಿದ್ಧಾಂತ ಅಳಿಯಲೇ ಬೇಕು. ದೇಶದ ಜನರು ಒಟ್ಟಾಗಿ ಹೋರಾಟಕ್ಕೆ ಇಳಿಯಬೇಕಾಗಿದೆ, ಇದು ಸಂವಿದಾನ ಮತ್ತು ಪ್ರಜಾಪ್ರಭುತ್ವದ ಅಳಿವು ಉಳಿವಿನ ಅಂತಿಮ ಹೋರಾಟ ಎಂದು ಅವರು‌ Xನಲ್ಲಿ ಪೋಸ್ಟ್ ಮಾಡಿದ್ದಾರೆ.



Join Whatsapp