ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರ ಆಯೋಗಕ್ಕೆ ಸಲ್ಲಿಸಿದ SBI

Prasthutha|

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಚುನಾವಣಾ ಬಾಂಡ್ ಸಂಖ್ಯೆಗಳ ವಿವರಗಳು ಸೇರಿದಂತೆ ಚುನಾವಣಾ ಬಾಂಡ್ ಗಳ ಸಂಪೂರ್ಣ ವಿವರಗಳನ್ನು SBI ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

- Advertisement -

ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಆಯ್ದ ಮಾಹಿತಿಯ ನೀಡುವುದನ್ನು ನಿಲ್ಲಿಸಿ ಸಂಪೂರ್ಣ ಮಾಹಿತಿಯನ್ನು ಮಾರ್ಚ್ 21ರೊಳಗೆ ಬಹಿರಂಗಪಡಿಸುವಂತೆ ಎಸ್.ಬಿ.ಐ.ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ತಾಕೀತು ಮಾಡಿತ್ತು.

ಚುನಾವಣಾ ಬಾಂಡ್ ಖರೀದಿದಾರರು ಮತ್ತು ಅದನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಸಂಬಂಧ ಬಹಿರಂಗಪಡಿಸುವ ವಿಶಿಷ್ಟ ಬಾಂಡ್ ನಂಬರ್ ಗಳ ಸಮಗ್ರ ಮಾಹಿತಿ ಕೂಡ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠದಿಂದ ನಿರ್ದೇಶನ ನೀಡಲಾಗಿತ್ತು.

- Advertisement -

ಮಾರ್ಚ್ 18 ರಂದು ಸುಪ್ರೀಂ ಕೋರ್ಟ್ ಎಸ್ಬಿಐಗೆ ತನ್ನ ಬಳಿ ಇರುವ ಚುನಾವಣಾ ಬಾಂಡ್ಗಳ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಕೇಳಿತ್ತು.



Join Whatsapp