ದಾರಿತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಯಾಚಿಸಿದ ಪತಂಜಲಿ

Prasthutha|

ಬೆಂಗಳೂರು: ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ ಕಂಪನಿ, ಬೇಷರತ್ ಕ್ಷಮೆ ಕೋರಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

- Advertisement -


ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹಾಗೂ ಯೋಗ ಗುರು ರಾಮದೇವ್ ಅವರ ಓರ್ವ ಸಹಾಯಕ ಸುಪ್ರೀಂ ಕೋರ್ಟಿನಿಂದ ಕ್ಷಮೆಯಾಚಿಸಿದ್ದಾರೆ.


ಕಾನೂನಿನ ಮೇಲೆ ಅತ್ಯುನ್ನತ ಗೌರವವಿದೆ ಎಂದು ಹೇಳಿ ಬೇಷರತ್ ಕ್ಷಮೆ ಯಾಚಿಸುವುದಾಗಿ ಅಫಿಡವಿಟ್ನಲ್ಲಿ ತಿಳಿಸಿದ ಆಚಾರ್ಯ ಬಾಲಕೃಷ್ಣ, ತಮ್ಮ ಸಂಸ್ಥೆ ಮುಂದೆ ಇಂತಹ ಜಾಹೀರಾತುಗಳನ್ನು ಪ್ರಕಟಿಸದೇ ಇರುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

- Advertisement -


ಪ್ರಾಚೀನ ಆಯುರ್ವೇದದ ಕುರಿತಾದ ಸಂಶೋಧನೆಯ ಬೆಂಬಲದೊಂದಿಗೆ ಸಿದ್ಧಪಡಿಸಲಾದ ಪತಂಜಲಿ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರ ಜೀವನ ನಡೆಸಿ ಎಂದು ಜನರಿಗೆ ಸಲಹೆ ನೀಡುವ ಉದ್ದೇಶವನ್ನಷ್ಟೇ ಕಂಪೆನಿ ಹೊಂದಿದೆ ಎಂದು ಅವರು ತಮ್ಮ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.



Join Whatsapp