ಚಿಕ್ಕಮಗಳೂರು: ಆನೆ ದಾಳಿ ವರದಿಯಾಗುತ್ತಿದ್ದ ಚಿಕ್ಕಮಗಳೂರಿನಲ್ಲಿ ಹುಲಿಯ ದಾಳಿಗೆ ಐದು ಹಸುಗಳು ಬಲಿಯಾದ ಘಟನೆ ನಡೆದಿದೆ. ಘಟನೆ ಚಿಕ್ಕಮಗಳೂರು ತಾಲೂಕಿನ ಕಠಾರದಹಳ್ಳಿಯಲ್ಲಿ ನಡೆದಿದೆ.
ಹುಲಿ ದಾಳಿಗೆ ಚಂದ್ರು-ಮುಳ್ಳಪ್ಪ ಎಂಬುವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಮೇಯಲು ಬಿಟ್ಟ ಹಸುಗಳು ಮನೆಗೆ ಬಂದಿರಲಿಲ್ಲ. ಮರುದಿನ ಕಾಫಿ ತೋಟದಲ್ಲಿ ಹಸುವಿನ ಮೃತದೇಹಗಳು ಪತ್ತೆಯಾಗಿದೆ.
ಒಂದು ಹಸು ಗಾಯಗೊಂಡಿದ್ದು, ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಆನೆ ದಾಳಿಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಹುಲಿ ದಾಳಿಯ ಭೀತಿ ಎದುರಾಗಿದೆ. ಹುಲಿಯ ದಾಳಿಗೆ ಬೆಚ್ಚಿಬಿದ್ದಿರುವ ಜನರು ಮನೆಯಿಂದ ಹೊರಬಾರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.