ಕೊಣಾಜೆ: ನರಿಂಗಾನ ಗ್ರಾಮದ ಬೋಳ ಲವ ಕುಶ ಕಂಬಳ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೃದ್ಧರೋರ್ವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು, 20 ಸಾವಿರ ಮೌಲ್ಯದ 998 ಗ್ರಾಂ ಗಾಂಜಾ ಹಾಗೂ ಆಕ್ಟಿವಾ ಸ್ಕೂಟರ್ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮೂಲತಃ ಕಾಟಿಪಳ್ಳ ನಿವಾಸಿ, ಪ್ರಸಕ್ತ ನೆತ್ತಿಲಪದವಿನಲ್ಲಿ ವಾಸವಿರುವ ಉಮ್ಮರ್ ಫಾರೂಕ್ ಯಾನೆ ಮಂಗಳ್ ಫಾರೂಕ್ ಯಾನೆ ಕುಶ್ಮೋನು (68) ಎಂದು ಗುರುತಿಸಲಾಗಿದೆ.
ಕೊಣಾಜೆ ಠಾಣಾ ಪಿ.ಎಸ್.ಐ. ಪುನೀತ್ ಗಾಂವಕಾರ್ ಲಭಿಸಿದ ಮಾಹಿತಿಯಂತೆ ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 52800 ಎಂದು ಅಂದಾಜಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.