ನವದೆಹಲಿ: ಲೋಕಸಭಾ ಚುನಾವಣೆ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಸುದ್ದಿಗೋಷ್ಠಿ ನಡೆಸಿದ್ದು ಅದರ ಮುಖ್ಯಾಂಶಗಳು ಹೀಗಿವೆ:
◾ಭಾರತದ ಚುನಾವಣಾ ಆಯೋಗವು ವಿಶ್ವ ವೇದಿಕೆಯಲ್ಲಿ ಭಾರತದ ಛಾಪನ್ನು ಹೆಚ್ಚಿಸುವ ರೀತಿಯಲ್ಲಿ ರಾಷ್ಟ್ರೀಯ ಚುನಾವಣೆಯನ್ನು ನಡೆಸುವ ಭರವಸೆಯನ್ನು ನೀಡಿದೆ. ಎಲ್ಲಾ ರಾಜ್ಯಗಳ ಚುನಾವಣಾ ತಯಾರಿಯ ಮೌಲ್ಯಮಾಪನದ ನಂತರ, ಸ್ಮರಣೀಯ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವ ವಿಶ್ವಾಸವಿದೆ.
◾ಭಾರತದ ನ್ಯಾಯಾಲಯಗಳು ಇವಿಎಂಗಳ ವಿರುದ್ಧದ ವಿವಿಧ ದೂರುಗಳನ್ನು 40 ಬಾರಿ ಪರಿಶೀಲಿಸಿದ್ದು, ಪ್ರತಿ ಬಾರಿಯೂ ಎಲ್ಲಾ ಆರೋಪಗಳನ್ನು ತಿರಸ್ಕರಿಸಿವೆ.ಇವಿಎಂಗಳು ಸಂಪೂರ್ಣ ಸುರಕ್ಷಿತ ಎಂದು ನ್ಯಾಯಾಲಯಗಳು ಪದೇ ಪದೇ ಹೇಳುತ್ತಿವೆ.
◾ಲೋಕಸಭಾ ಚುನಾವಣೆ 2024ರ ದಿನಾಂಕ, ವೇಳಾಪಟ್ಟಿ ಪ್ರಕಟವಾಗಿದ್ದು, ಈ ಸಲದ ಚುನಾವಣೆಯಲ್ಲಿ ಮತಚಲಾಯಿಸಲಿರುವ ಮತದಾರರ ಸಂಖ್ಯೆ 96.88 ಕೋಟಿ ಇದೆ.
◾ಈ ವರ್ಷ 1.89 ಕೋಟಿ ಮೊದಲ ಸಲ ಮತ ಚಲಾಯಿಸುವ ಮತದಾರರು ಇರಲಿದ್ದು, ಅವರಲ್ಲಿ 85 ಲಕ್ಷ ಮಹಿಳೆಯರು.
◾12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರು ಹೆಚ್ಚು
ಈ ಸಲದ ಲೋಕಸಭೆ ಚುನಾವಣೆಗೆ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷರಿಗಿಂತ ಹೆಚ್ಚಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 96.8 ಕೋಟಿ. ಈ ಪೈಕಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳೆಯರು ಮತ್ತು 48,000 ತೃತೀಯ ಲಿಂಗಿಗಳು ಇದ್ದಾರೆ.
ದೇಶದಲ್ಲಿ ಒಟ್ಟು ಅರ್ಹ ಮತದಾರರ ಸಂಖ್ಯೆ 96.88 ಕೋಟಿ. ಈ ಪೈಕಿ 49.72 ಕೋಟಿ ಪುರುಷ ಮತದಾರರು. 47.15 ಕೋಟಿ ಮಹಿಳಾ ಮತದಾರರು. ಉಳಿದಂತೆ, 48,044 ತೃತೀಯ ಲಿಂಗಿ ಮತದಾರರು. ಅಂಗವೈಕಲ್ಯ ಹೊಂದಿರುವ ಮತದಾರರ ಸಂಖ್ಯೆ 88.35 ಲಕ್ಷ. ಇನ್ನು 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 1.85 ಕೋಟಿ. 100 ವರ್ಷ ಮೇಲ್ಪಟ್ಟ ಮತದಾರರು 2.38 ಲಕ್ಷ ಇದ್ದಾರೆ. ಇನ್ನು 18-19ರ ವಯೋಮಾನದವರು 1.84 ಕೋಟಿ. 20-29 ವರ್ಷ ವಯೋಮಾನದವರು 19.74 ಕೋಟಿ ಮತದಾರರಿದ್ದಾರೆ.
◾ಭಾರತದ ಒಟ್ಟು ಮತದಾರರು: 96.88 ಕೋಟಿ
ಪುರುಷರು: 49.72 ಕೋಟಿ
ಮಹಿಳೆಯರು: 47.15 ಕೋಟಿ
ಕೆಲಸ ಮಾಡಲಿರುವ ಚುನಾವಣಾ ಸಿಬ್ಬಂದಿ: 1.5 ಕೋಟಿ
ಮತಗಟ್ಟೆಗಳು – 10.5 ಲಕ್ಷ
ಮತಯಂತ್ರಗಳು – 55 ಲಕ್ಷ
ಚುನಾವಣಾ ಕಾರ್ಯದ ವಾಹನಗಳು – 4 ಲಕ್ಷ
ಚುನಾವಣಾ ವೀಕ್ಷಕರ ಸಂಖ್ಯೆ- 21,000
ಚುನಾವಣೆಯ ಪ್ರಮುಖ ದಿನಾಂಕಗಳು
ಹಂತ * ಮತದಾನ ದಿನಾಂಕ
1ನೇ ಹಂತ 19.04.2024
2ನೇ ಹಂತ 26.04.2024
3ನೇ ಹಂತ 07.05.2024
4ನೇ ಹಂತ 13.05.2024
5ನೇ ಹಂತ 20.05.2024
6ನೇ ಹಂತ 25.05.2024
7ನೇ ಹಂತ -01.06.2024
ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ಈ ಹಿಂದಿನ ಚುನಾವಣೆಯಲ್ಲಿ ಅಂದರೆ 2019 ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 303, ಕಾಂಗ್ರೆಸ್ 52, ತೃಣಮೂಲ ಕಾಂಗ್ರೆಸ್ 22, ಬಿಎಸ್ಪಿ 10, ಎನ್ಸಿಪಿ 5, ಸಿಪಿಐ-ಎಂ 3 ಮತ್ತು ಸಿಪಿಐ 2 ಸ್ಥಾನಗಳನ್ನು ಗೆದ್ದುಕೊಂಡಿದ್ದವು.