ಮೈಸೂರು: ಯದುವಂಶದ ವಿಚಾರದಲ್ಲಿ ಮೈಸೂರು ಭಾಗ ಭಾವನಾತ್ಮಕವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜವಂಶಸ್ಥ ಯದುವೀರ್ ವಿರುದ್ಧ ತುಟಿ ಬಿಚ್ಚದಂತೆ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಸಿದದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದರು.
ಸ್ವಲ್ಪ ಹೆಚ್ಚು ಕಡಿಮೆ ಆದರೂ ನಮ್ಮ ಮಾತೇ ನಮಗೆ ಮುಳ್ಳಾಗುತ್ತೆ. ಸರ್ಕಾರದ ಗ್ಯಾರಂಟಿಗಳು, ಬಿಜೆಪಿ ಸುಳ್ಳುಗಳ ಮೇಲೆ ಪ್ರಚಾರ ಮಾಡಿ. ಯದುವೀರ್ ವಿಚಾರಕ್ಕೆ ಅಪ್ಪಿತಪ್ಪಿಯೂ ಹೋಗಬೇಡಿ. ಯದುವೀರ್ ವಿಚಾರದಲ್ಲಿ ಟೀಕೆ ಮಾಡಿದರೆ ಅದರ ಎಫೆಕ್ಟ್ ಮೈಸೂರು ಮಾತ್ರವಲ್ಲ ಬೇರೆ ಕ್ಷೇತ್ರದ ಮೇಲೂ ಆಗುತ್ತೆ ಎಚ್ಚರ ಇರಲಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಈ ಬಾರಿ ಬಿಜೆಪಿ ಯದುವೀರ್ ಒಡೆಯರ್ ಅವರಿಗೆ ನೀಡಿದ್ದು, ಎರಡು ಬಾರಿ ಜಯಗಳಿಸಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಟಿಕೆಟ್ ಕೈತಪ್ಪಿದೆ.