ಮಂಗಳೂರು:- ಕೂಳೂರು ಬಳಿಯ ಫಲ್ಗುಣಿ ನದಿಯಲ್ಲಿ ಓರ್ವ ಅಪರಿಚಿತ ಗಂಡಸು (50 ರಿಂದ 60 ವರ್ಷ) ಶವ ಪತ್ತೆಯಾಗಿದೆ. ನದಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವದ ವಾರಸುದಾರರು ಪತ್ತೆಗೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ: ಸುಮಾರು 5.3 ಅಡಿ ಎತ್ತರ, ದುಂಡು ಮುಖ ಹಾಗೂ ತಲೆಯಲ್ಲಿ ಸುಮಾರು 6 ರಿಂದ 8 ಇಂಚು ಕಪ್ಪು ಕೂದಲು ಹೊಂದಿರುತ್ತಾರೆ. ಕುರುಚಲು ಮೀಸೆ ಬಿಟ್ಟಿರುತ್ತಾರೆ. ಬಲಗೈ ಮೊಣಕೈ ಮುಂಭಾಗದಲ್ಲಿ ಎಳ್ಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಬಲ ಕಾಲಿನ ಕೋಲು ಕಾಲಿನಲ್ಲಿ ಗಾಯಕ್ಕೆ ಸುತ್ತಿರುವ ಬಿಳಿ ಬಣ್ಣದ ಬಟ್ಟೆಯ ಬ್ಯಾಂಡೆಜ್ ಇರುತ್ತದೆ.
ಈ ಅಪರಿಚಿತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಕಾವೂರು ಪೊಲೀಸ್ ಠಾಣೆ ಬೈಕಂಪಾಡಿ ದೂ.ಸಂಖ್ಯೆ:0824-2220533, ಪೊಲೀಸದ ನಿರೀಕ್ಷಕರು – 9480802346 ಅಥವಾ ಪೊಲೀಸ್ ಉಪ ನಿರೀಕ್ಷಕರು – 9480805358 ಅನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.