ಸಂಸದ ಪ್ರತಾಪ್ ಸಿಂಹ ಧೃತಿಗೆಡದೆ ತಾಳ್ಮೆಯಿಂದಿರಬೇಕು: ಆರ್ ಅಶೋಕ್

Prasthutha|

ಬೆಂಗಳೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಧೃತಿಗೆಡದೆ ತಾಳ್ಮೆಯಿಂದಿರಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟಿಕೆಟ್ ಹಂಚಿಕೆ ಇನ್ನೂ ದೃಢಪಡದ ಕಾರಣ ಪ್ರತಾಪ್ ಸಿಂಹ ಧೃತಿಗೆಡುವ ಅಗತ್ಯವಿಲ್ಲ, ಅವರು ಕೊನೆವರೆಗೆ ತಾಳ್ಮೆ ಪ್ರದರ್ಶಿಸಬೇಕು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.


ಯದುವೀರ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ತನಗೆ ಮಾಹಿತಿ ಇಲ್ಲ ಮತ್ತು ತಾನು ಅವರಿಗೆ ಫೋನ್ ಕೂಡ ಮಾಡಿಲ್ಲ ಎಂದು ಅಶೋಕ ಹೇಳಿದರು. ಟಿಕೆಟ್ ಯಾರಿಗೆ ಸಿಕ್ಕರೂ ಜಿಲ್ಲಾ ಘಟಕದ ಕಾರ್ಯಕರ್ತರೆಲ್ಲ ಅವರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾಧ್ಯಕ್ಷರು ಹೇಳಿದ್ದಾರೆ ಮತ್ತು ಪ್ರತಾಪದ ಸಿಂಹ ಸಹ ಅಭ್ಯರ್ಥಿಯ ಕರಪತ್ರಗಳನ್ನು ಹಂಚುವುದಾಗಿ ಹೇಳಿದ್ದಾರೆ ಎಂದು ಆಶೋಕ ತಿಳಿಸಿದರು.



Join Whatsapp