CAA ವಿರುದ್ಧ ಬೋಳಿಯಾರ್ ನಲ್ಲಿ ಬೃಹತ್ ಪ್ರತಿಭಟನೆ

Prasthutha|

ಬೋಳಿಯಾರ್: ಕೇಂದ್ರ ಸರಕಾರ ಅಸಾಂವಿಧಾನಿಕ CAA ಜಾರಿ ಮಾಡಿದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ  ಎಸ್ ಡಿ ಪಿ ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ  ಸಮಿತಿ ಅಧ್ಯಕ್ಷರಾದ ಅಝೀಝ್ ಮದಕ  ರವರ ನೇತೃತ್ವದಲ್ಲಿ ಬೋಳಿಯಾರ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

- Advertisement -

NRC ಮತ್ತು  CAA ಎಂಬುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಇದು ದೇಶವನ್ನು ವಿಭಜನೆಯತ್ತ ಕೊಂಡೊಯ್ಯುವ ಷಡ್ಯಂತರದಿಂದ ಕೂಡಿದೆ ಅದು ಅಲ್ಲದೆ ಕೇಂದ್ರ ಸರಕಾರದ ಆಡಳಿತ ವೈಫಲ್ಯತೆಯನ್ನು ಮರೆಮಾಚಲು ಇದನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ ಆದ್ದರಿಂದ ಇದನ್ನು ಒಪ್ಪುವಂತದ್ದಲ್ಲ ಆದ್ದರಿಂದ ಸೋಶಿಯಲ್  ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ವಿರೋಧಿಸುತ್ತದೆ ಎಂದು ಎಸ್ ಡಿ ಪಿ ಐ ಮುನ್ನೂರು ಬ್ಲಾಕ್  ಕಾರ್ಯದರ್ಶಿ ರಹಿಮಾನ್ ಮಠ ಬೋಳಿಯಾರ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 ಈ ಸಂದರ್ಭದಲ್ಲಿ ಎಸ್ ಡಿ ಪಿ ಐ  ಮುನ್ನೂರು ಬ್ಲಾಕ್ ಸದಸ್ಯರಾದ ಶರೀಫ್ ರಂತಡ್ಕ ಗ್ರಾಮ ಸಮಿತಿ ಕಾರ್ಯದರ್ಶಿ ಕಬೀರ್ ಬೋಳಿಯಾರ್ ಸಮಿತಿ ಕೋಶಾಧಿಕಾರಿ ಶರ್ವನ್ ಬೋಳಿಯಾರ್ ಪಲ್ಲ ವಾರ್ಡ್ ಅಧ್ಯಕ್ಷರಾದ ಸಿರಾಜ್ ಪಲ್ಲ  ಎನ್.ಜಿ ವಾರ್ಡ್ ಅಧ್ಯಕ್ಷರಾದ ಇಂತಿಯಾಝ್ NG ರಂತಡ್ಕ ವಾರ್ಡ್ ಕಾರ್ಯದರ್ಶಿ ಯೂನೂಸ್ ರಂತಡ್ಕ  ಅಮ್ಮೆಂಬಳ ವಾರ್ಡ್ ಅಧ್ಯಕ್ಷರಾದ ಜವಾದ್ ಅಮ್ಮೆಂಬಳ ಹಾಗೂ ಬೋಳಿಯಾರ್ ವ್ಯಾಪ್ತಿಯ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.



Join Whatsapp