ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿಗೆ(ಎನ್ ಆರ್ ಸಿ) ಅರ್ಜಿ ಸಲ್ಲಿಸದ ವ್ಯಕ್ತಿಯೊಬ್ಬರು ಪೌರತ್ವ ಪಡೆದರೆ ಮೊದಲು ನಾನೇ ರಾಜೀನಾಮೆ ನೀಡಲಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯಿದೆ, 2019 (ಸಿಎಎ)ನ್ನು ಕೇಂದ್ರ ಸರ್ಕಾರ ಸೋಮವಾರ ಜಾರಿಗೆ ತಂದಿದೆ. “ನಾನು ಅಸ್ಸಾಂನ ಮಗ ಮತ್ತು ಎನ್ ಆರ್ ಸಿಗೆ ಅರ್ಜಿ ಸಲ್ಲಿಸದ ಒಬ್ಬ ವ್ಯಕ್ತಿ ಪೌರತ್ವವನ್ನು ಪಡೆದರೆ, ನಾನು ಮೊದಲು ರಾಜೀನಾಮೆ ನೀಡುತ್ತೇನೆ” ಎಂದು ಶಿವಸಾಗರ್ನಲ್ಲಿ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಸಿಎಂ ಶರ್ಮಾ ಹೇಳಿದ್ದಾರೆ.
ಸಿಎಎಯಲ್ಲಿ ಹೊಸದೇನೂ ಇಲ್ಲ, ಅದನ್ನು ಮೊದಲೇ ಜಾರಿಗೊಳಿಸಲಾಗಿದೆ. ಈಗ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಸಮಯ ಬಂದಿದೆ. ಪೋರ್ಟಲ್ ನಲ್ಲಿರುವ ಡೇಟಾ ಈಗ ಮಾತನಾಡುತ್ತದೆ ಮತ್ತು ಕಾಯಿದೆಯನ್ನು ವಿರೋಧಿಸುವವರ ಹಕ್ಕುಗಳು ವಾಸ್ತವಿಕವಾಗಿ ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.