ಮಧ್ಯಪ್ರದೇಶ: ಮದುವೆ ಮೆರವಣಿಗೆ ಮೇಲೆ ಹರಿದ ಟ್ರಕ್, 6 ಮಂದಿ ಮೃತ್ಯು

Prasthutha|

ರೈಸನ್: ವೇಗವಾಗಿ ಬಂದ ಟ್ರಕ್ ವೊಂದು ಮದುವೆ ಮೆರವಣಿಗೆ ಮೇಲೆ ಹರಿದ ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

- Advertisement -

ಜಿಲ್ಲೆಯ ಖಮಾರಿಯಾ ಘಾಟ್ ನಲ್ಲಿ ಭೋಪಾಲ್-ಜಬಲ್ ಪುರ ರಸ್ತೆ NH-45 ನಲ್ಲಿ ಘಟನೆ ನಡೆದಿದೆ.

ಘಟನೆಯಲ್ಲಿ 11 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹೋಶಂಗಾಬಾದ್ ನಿಂದ ರೈಸನ್ ನ ಪಿಪಾರಿಯಾ ಗ್ರಾಮಕ್ಕೆ ಮದುವೆ ಮೆರವಣಿಗೆ ಬಂದಿತ್ತು. ಇದೇ ವೇಳೆ ವೇಗವಾಗಿ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಮದುವೆ ಮೆರವಣಿಗೆ ಮೇಲೆ ಹರಿದಿದೆ. ಇದರಿಂದಾಗಿ 6 ಸ್ಥಳದಲ್ಲೇ ಮೃತಪಟ್ಟಿದ್ದಾರೆ.



Join Whatsapp