ಮಂಗಳೂರಿನಲ್ಲೊಂದು ಅಮಾನವೀಯ ಕೃತ್ಯ: 87ರ ವೃದ್ಧ ಮಾವನಿಗೆ ಕ್ರೂರವಾಗಿ ಥಳಿಸಿದ ಸೊಸೆ

Prasthutha|

ಮಂಗಳೂರು: 87 ವಯಸ್ಸಿನ ವೃದ್ಧ ಮಾವನನ್ನು ಸೊಸೆಯೊಬ್ಬಳು ಆತನ ವಾಕಿಂಗ್ ಸ್ಟಿಕ್‌ನಿಂದ ಅಮಾನವೀಯವಾಗಿ ಥಳಿಸಿರುವ ಕೃತ್ಯ ಮಂಗಳೂರಲ್ಲಿ ನಡೆದಿದೆ. ಘಟನೆಯ ಸಿಸಿ ಕೆಮರಾ ದೃಶ್ಯ ವೈರಳ್ ಆಗಿದೆ.

- Advertisement -

ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಉಮಾಶಂಕರಿ ಮನೆಯಲ್ಲಿರುವ ವೃದ್ಧ ಮಾನವನನ್ನು ಅವರ ವಾಕಿಂಗ್ ಸ್ಟಿಕ್ ಕಸಿದುಕೊಂಡು ಭೀಕರವಾಗಿ ಥಳಿಸಿದ ಕೃತ್ಯ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಿಂದ ಬಯಲಾಗಿದೆ.

ವೈರಲ್ ಆಗಿರುವ ವೀಡಿಯೋ ದೃಶ್ಯಾವಳಿಯಲ್ಲಿ ಉಮಾಶಂಕರಿ ಮಾವನಿಗೆ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ್ದು ಆಕ್ರೋಶ ಉಂಟುಮಾಡುವಂತೆ ಇದೆ. ಈ ಸಂದರ್ಭದಲ್ಲಿ 87 ವಯಸ್ಸಿನ ವೃದ್ದ ಪದ್ಮನಾಭ ಸುವರ್ಣ ಹೊಡೆಯದಂತೆ ಕೈ ಅಡ್ಡಮಾಡಿ, ವಾಕಿಂಗ್ ಸ್ಟಿಕ್ ಹಿಡಿದು ತಡೆಯಲು ಹೋದಾಗ ಅವರನ್ನೇ ಉಮಾಶಂಕರಿ ತಳ್ಳಿದ್ದಾಳೆ. ಆಗ ಸೋಫಾ ಮೇಲೆಯೇ ಬಿದ್ದ ಪದ್ಮನಾಭ ನೋವಿನಿಂದ ಕೆಳಗೆ ಬಿದ್ದು ನರಳುತ್ತಿರೋದನ್ನು ಕಾಣಬಹುದಾಗಿದೆ.

- Advertisement -

ಸೊಸೆಯಿಂದ ಹಲ್ಲೆಗೊಳಗಾದ ಪದ್ಮನಾಭ ಸುವರ್ಣ ಗಾಯಗೊಂಡಿದ್ದಾರೆ. ಅವರ ಮಗ ಪ್ರೀತಮ್‌ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪದ್ಮನಾಭ ಅವರು ಸೊಸೆಯೊಂದಿಗೆ (ಮಗನ ಪತ್ನಿ) ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ.

ಅದರಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲು ಮಾಡಲಾಗಿದ್ದು, ಉಮಾಶಂಕರಿಯನ್ನು ಪೊಲೀಸರು ಬಂಧಿಸಿದ್ದಾರೆ.



Join Whatsapp