ಲೋಕಪಾಲ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ಎ.ಎಂ. ಖಾನ್ವಿಲ್ಕರ್ ಪ್ರಮಾಣ ವಚನ ಸ್ವೀಕಾರ

Prasthutha|

ನವದೆಹಲಿ: ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ಎ ಎಂ ಖಾನ್ವಿಲ್ಕರ್ ಅವರು ಲೋಕಪಾಲ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಲೋಕಪಾಲ ಮುಖ್ಯಸ್ಥರಿಗೆ ಪ್ರಮಾಣ ವಚನ ಬೋಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

66 ವರ್ಷದ ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಮೇ 13, 2016 ರಿಂದ ಜುಲೈ 29, 2022 ರವರೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಲೋಕಪಾಲ್ ಅಧ್ಯಕ್ಷ ಖಾನ್ವಿಲ್ಕರ್‌ಗೆ ರಾಷ್ಟ್ರಪತಿ ಪ್ರಮಾಣ ವಚನ ಬೋಧಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೇ 27, 2022 ರಂದು ಪಿನಾಕಿ ಚಂದ್ರ ಘೋಸ್ ನಿವೃತ್ತಿಯ ನಂತರ ಖಾಲಿಯಾದ ಹುದ್ದೆಗೆ ಸುಮಾರು ಎರಡು ವರ್ಷಗಳ ನಂತರ ಕಳೆದ ತಿಂಗಳು ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರನ್ನು ಭ್ರಷ್ಟಾಚಾರ ವಿರೋಧಿ ಲೋಕಪಾಲ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.



Join Whatsapp