ಬಾಗಲಕೋಟೆ: ಸಂಸದ ಪ್ರತಾಪಸಿಂಹ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಕಲಾದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ಞಾಸಿಂಗ್ ಅವರಿಗೂ ಟಿಕೆಟ್ ತಪ್ಪಿದ್ದು ಸರಿಯಲ್ಲ. ಹಾಗೆಯೇ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಬಾರದು ಎಂದಿದ್ದಾರೆ.
ಗೋಡ್ಸೆ ಒಬ್ಬ ದೇಶಭಕ್ತ. ಗಾಂಧೀಜಿಗೆ ಗುಂಡು ಹಾಕಿದ್ದು ತಪ್ಪು ಇರಬಹುದು. ಆದರೆ ದೇಶದ್ರೋಹ ಎನ್ನುವುದು ತಪ್ಪು. ಇಂಡಿಯಾ ಒಕ್ಕೂಟದಿಂದ ಬಿಜೆಪಿಗೆ ಹಿನ್ನಡೆಯಾಗದು. ಅದು ದಾರಿ ತಪ್ಪಿದ, ವಿಚಾರಹಿತ ಒಕ್ಕೂಟ. ಯಾವುದೇ ಸಿದ್ಧಾಂತ, ನೀತಿ-ನಡವಳಿಕೆ ಇಲ್ಲ ಎಂದು ಮುತಾಲಿಕ್ ಹೇಳಿದರು..