ಕಿತ್ತೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಆಸ್ಪತ್ರೆಯಿಂದ ಎದ್ದು ಬರುವ ಜನರಿದ್ದಾರೆ. ಅವರು ಯಾರನ್ನೋ ಮನಸೋಇಚ್ಛೆ ಬೈಯ್ಯುವ ಮೂಲಕ ಸುದ್ದಿಗೆ ಬರುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಯ್ಯುವುದರಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯಲು ಸುಲಭ ಎಂದರು.
ದೆಹಲಿಯಿಂದ ಬಂದು ಇಲ್ಲಿನ ಜನರಿಗೆ ಟೋಪಿ ಹಾಕಿ ಹೋಗುವವರನ್ನು ಕ್ಷೇತ್ರದ ಜನ ನಂಬದೆ, ಸದಾ ನಿಮ್ಮೊಂದಿಗೆ ಇರುವವರನ್ನು ಬೆಂಬಲಿಸಿ ಹೇಳಿದರು.