ದಾವಣೆಗೆರೆ: ಬೆಳಗಾವಿಯ ನಿಪ್ಪಾಣಿಯ ಶ್ರೀರಾಮಮಂದಿರ ದೇವಾಲಯವನ್ನು ಸ್ಫೋಟಿಸೋದಾಗಿ ಬಾಂಬ್ ಬೆದರಿಕೆ ಪತ್ರ ಬಂದಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಹೀಗಾಗಿ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸೋದಕ್ಕೆ ಸೂಚಿಸಲಾಗಿದೆ ಎಂದರು.
ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳೋದಕ್ಕೆ ಮುಜರಾಯಿ ಇಲಾಖೆಯ ಎಂಡಿಗೆ ಸೂಚಿಸಿದ್ದೇನೆ. ಅವರು ಸೂಕ್ತ ಭದ್ರತೆ ಕುರಿತಂತೆ ಆದೇಶ ಮಾಡಲಿದ್ದಾರೆ ಎಂದು ತಿಳಿಸಿದರು.