ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರೆ ಒಂದು ತಿಂಗಳೊಳಗೆ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಸುಧಾಕರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಅನ್ನೋ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ಮೇಷ್ಟ್ರು ಮಗ ಅಂತ ಹೇಳಿಕೊಂಡು ಭ್ರಷ್ಟಾಚಾರದ ಮೂಲಕ ಇಂದು ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ. ಹಾಗಾಗಿ ಬಿಜೆಪಿಯವರೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ರೆ ಇಡಿ ಹಾಗೂ ಐಡಿ ರೇಡ್ ಮಾಡಿಸಿ ಜೈಲಿಗೆ ಹಾಕಿಸ್ತಾರೆ ಅಂತ ಟಾಂಗ್ ನೀಡಿದರು.
ಸುಧಾಕರ್ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ. ಪಕ್ಷದ್ರೋಹ ಮೋಸ ಮಾಡಿರುವ ಸುಧಾಕರ್ ನ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಸೇರಿಸಿಕೊಳ್ಳೋದು ಬೇಡ. ಒಂದು ವೇಳೆ ಸೇರಿಸಿಕೊಂಡರೆ ತೀವ್ರ ವಿರೋಧ ಮಾಡುತ್ತೇವೆ ಅಂತ ಹೇಳಿದರು.