ಅಂಕಾರ: ಇಸ್ರೇಲ್ನ ಗೂಢಚಾರ ಸಂಸ್ಥೆ ಮೊಸಾದ್ಗೆ ರಹಸ್ಯ ಮಾಹಿತಿ ಒದಗಿಸುತ್ತಿದ್ದ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಟರ್ಕಿ ಪೊಲೀಸರು ಹೇಳಿದ್ದಾರೆ.
ಟರ್ಕಿಯ ಕೆಲವು ಪ್ರಮುಖ ವ್ಯಕ್ತಿಗಳ ಮತ್ತು ಸಂಸ್ಥೆಗಳ ಕುರಿತ ಮಾಹಿತಿಯನ್ನು ಮೊಸಾದ್ಗೆ ರವಾನಿಸುತ್ತಿದ್ದ ಶಂಕಿತರನ್ನು ಇಸ್ತಾಂಬುಲ್ನಲ್ಲಿ ಬಂಧಿಸಲಾಗಿದೆ ಎಂದು ಟರ್ಕಿ ಪೊಲೀಸರು ಮಾಹಿತಿ ನೀಡಿದ್ದಾರೆ.
ದೇಶದ ಗಡಿಯೊಳಗೆ ರಾಷ್ಟ್ರದ್ರೋಹಿ ಕೃತ್ಯ ನಡೆಸಲು ನಾವು ಆಸ್ಪದ ನೀಡುವುದಿಲ್ಲ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಟರ್ಕಿಯ ಆಂತರಿಕ ಇಲಾಖೆ ಹೇಳಿದೆ.