ಕಡಬ ಆ್ಯಸಿಡ್ ದಾಳಿ | ಪ್ರೀತಿ ನಿರಾಕರಿಸಿದ್ದಕ್ಕೆ ಕೃತ್ಯ ಸಾಧ್ಯತೆ: ಎಸ್’ಪಿ ರಿಷ್ಯಂತ್

Prasthutha|

ಕಡಬ: ವಿದ್ಯಾರ್ಥಿನಿ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಯುವಕ ಆ್ಯಸಿಡ್ ದಾಳಿ ನಡೆಸಿರಬಹುದು ಎಂದು ದಕ್ಷಿಣ ಕನ್ನಡ ಎಸ್.ಪಿ ರಿಷ್ಯಂತ್ ತಿಳಿಸಿದ್ದಾರೆ.

- Advertisement -


ಕಡಬ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಆರೋಪಿ ಅಬಿನ್ ಮೂಲತಃ ಕೇರಳದ ಮಲಪ್ಪುರಂ’ನವನು, ಹುಡುಗಿಯ ತಾಯಿಯ ಮನೆಯ ಪಕ್ಜದಲ್ಲೇ ಆರೋಪಿಯ ಮನೆ ಇದೆ, ಅಲ್ಲಿ ಇಬ್ಬರಿಗೆ ಪರಿಚಯ ಆಗಿದೆ ಅನಿಸುತ್ತೆ, ಮೇಲ್ನೋಟದಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆ್ಯಸಿಡ್ ದಾಳಿ ಮಾಡಿರಬಹುದು ಅನಿಸುತ್ತೆ, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

- Advertisement -

ಘಟನೆಯಲ್ಲಿ ವಿದ್ಯಾರ್ಥಿನಿಯ ಮುಖ ಹಾಗೂ ಶರೀರದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಜೊತೆಯಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿನಿಯರ ಕೈಗಳಿಗೆ ಗಾಯಗಳಾಗಿವೆ ಎಂದು ಎಸ್.ಪಿ ತಿಳಿಸಿದರು.

ಆರೋಪಿಯು ಕಾಲೇಜಿನ ಸಮವಸ್ತ್ರ ಧರಿಸಿದ್ದ ಎಂಬ ಮಾಹಿತಿ ಇದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.




Join Whatsapp