ವಿವಾದಾತ್ಮಕ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಬಿಜೆಪಿ ಟಿಕೆಟ್ ಇಲ್ಲ

Prasthutha|

ಬೋಫಾಲ್: ಲೋಕಸಭೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಟಿಕೆಟ್ ನಿರಾಕರಿಸಲಾಗಿದೆ. ಭೋಪಾಲ್‌ನಿಂದ ಪ್ರಜ್ಞಾ ಸಿಂಗ್ ಬದಲಿಗೆ ಅಲೋಕ್ ಶರ್ಮಾಗೆ ಟಿಕೆಟ್ ನೀಡಲಾಗಿದೆ.

- Advertisement -

ಪ್ರಜ್ಞಾ ಸಿಂಗ್ ಒಳಗೊಂಡಂತೆ ಆರು ಸ್ಥಾನಗಳಲ್ಲಿ ಬಿಜೆಪಿಯ ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಅಲೋಕ್ ಶರ್ಮಾಗೆ ಟಿಕೆಟ್ ನೀಡಿರುವ ಕ್ರಮವನ್ನು ಸ್ವಾಗತಿಸಿರುವ ಪ್ರಜ್ಞಾ ಸಿಂಗ್ ಠಾಕೂರ್, ನಾನು ಅವರು ಗೆಲುವು ಸಾಧಿಸಲಿ ಎಂದು ಆಶೀರ್ವದಿಸುತ್ತೇನೆ ಎಂದಿದ್ದಾರೆ‌. ಭೋಪಾಲ್‌ನಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. ಸಂಘಟನೆ ಟಿಕೆಟ್ ನಿರ್ಧರಿಸುತ್ತದೆ, ಹೀಗಾಗಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಬೇಸರವಿಲ್ಲ. 29 ಸ್ಥಾನಗಳನ್ನು ಗೆಲ್ಲುವುದು ಮುಖ್ಯ ಎಂದು ಹೇಳಿದ್ದಾರೆ.

- Advertisement -

ಪ್ರಜ್ಞಾ ಸಿಂಗ್ ಠಾಕೂರ್ 2008ರಲ್ಲಿ ನಡೆದಿದ್ದ ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಐದು ವರ್ಷಗಳ ಸಂಸದರಾಗಿರುವ ಅವಧಿಯಲ್ಲಿ ಮತ್ತಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ‌. ಆರೋಗ್ಯ ಸಮಸ್ಯೆಯ ನೆಪದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ಪ್ರಜ್ಞಾ, ಕಬಡ್ಡಿ ಆಡುತ್ತಿರುವುದು ಹಾಗೂ ಗಾರ್ಬಾ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದೃಶ್ಯಗಳಲ್ಲಿ ಕಂಡು ಬಂದು, ಬಿಜೆಪಿ ಮತ್ತಷ್ಟು ಮುಜುಗರಕ್ಕೀಡಾಗಿತ್ತು. ಮಹಾತ್ಮ ಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಮಹಾನ್ ದೇಶಪ್ರೇಮಿ ಎಂದು ಕೂಡ ಸಂಸದೆ ಪ್ರಜ್ಞಾ ಠಾಕೂ‍ರ್ ಬಣ್ಣಿಸಿದ್ದರು.



Join Whatsapp