85 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅಂಚೆ ಮತಪತ್ರ ಸೌಲಭ್ಯ

Prasthutha|

ನವದೆಹಲಿ: ಇಲ್ಲಿಯವರೆಗೆ, 80 ವರ್ಷಕ್ಕಿಂತ ಮೇಲ್ಪಟ್ಟವರು ಸೌಲಭ್ಯಕ್ಕೆ ಅರ್ಹರಾಗಿದ್ದರು. ಇನ್ನು ಮುಂದೆ 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಚುನಾವಣೆಯಲ್ಲಿ ಅಂಚೆ ಮತಪತ್ರ ಸೌಲಭ್ಯವನ್ನು ಬಳಸಲು ಅನುವು ಮಾಡಿಕೊಡಲು ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾಡಿದೆ.

- Advertisement -

ಲೋಕಸಭೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಕೆಲವು ದಿನಗಳ ಮೊದಲು ಈ ತಿದ್ದುಪಡಿಯಾಗಿದೆ.

ಚುನಾವಣಾ ಆಯೋಗ (EC) ನೀಡಿರುವ ಇತ್ತೀಚಿನ ಮತದಾರರ ಪಟ್ಟಿಯ ಪ್ರಕಾರ, 1.85 ಕೋಟಿ ಮತದಾರರನ್ನು 80 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಗುರುತಿಸಲಾಗಿದೆ, 100 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರ ಸಂಖ್ಯೆ 2.38 ಲಕ್ಷದಷ್ಟಿದೆ.

- Advertisement -

ಶುಕ್ರವಾರ ಕಾನೂನು ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಸೌಲಭ್ಯವನ್ನು ವಿಸ್ತರಿಸಲು ಚುನಾವಣಾ ನಿಯಮಗಳು, 1961 ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ.



Join Whatsapp