ವಿಟ್ಲ: ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಪಾದ್ರಿ ಸೇವೆಯಿಂದ ವಜಾ

Prasthutha|

ಮಂಗಳೂರು: ದಕ್ಷಿಣ ಕನ್ನಡದ ಪರಿಯಲ್ತಡ್ಕ ಗ್ರಾಮದಲ್ಲಿ ಚರ್ಚ್ ಪಾದ್ರಿಯೊಬ್ಬರು ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಪಾದ್ರಿಯನ್ನು ಸಂಬಂಧಪಟ್ಟ ಚರ್ಚ್ ನ ಧಾರ್ಮಿಕ ಹುದ್ದೆಯಿಂದ ತಕ್ಷಣದಿಂದ ಅನ್ವಯವಾಗುವಂತೆ ತೆರವುಗೊಳಿಸುತ್ತಿರುವುದಾಗಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ(ಡಯಾಸಿಸ್ ಆಫ್ ಮಂಗಳೂರು)ದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಫಾ.ಜೆ.ಬಿ.ಸಲ್ದಾನ ಮತ್ತು ರೊನಾಲ್ಡ್ ಕ್ಯಾಸ್ತಲಿನೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಘಟನೆಯಿಂದ ತೀವ್ರ ದುಃಖವಾಗಿದ್ದು, ತಕ್ಷಣದ ಪ್ರತಿಕ್ರಿಯೆಯಾಗಿ ಸಂಬಂಧಪಟ್ಟ ಪಾದ್ರಿಯನ್ನು ಕ್ರೈಸ್ಟ್ ಕಿಂಗ್ ಚರ್ಚ್ ನ ಧಾರ್ಮಿಕ ಸೇವೆಯಿಂದ ವಜಾಗೊಳಿಸಲಾಗುವುದು ಮತ್ತು ಆಧ್ಯಾತ್ಮಿಕ ಅಗತ್ಯಗಳಿಗೆ ಸೇವೆ ಸಲ್ಲಿಸಲು ಬೇರೆಯವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.


“ಧರ್ಮಾಧಿಕಾರವು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತದೆ ಮತ್ತು ಸರ್ಕಾರಿ ಇಲಾಖೆಗಳಿಂದ ಪ್ರಾರಂಭಿಸಲಾದ ವಿಚಾರಣೆಯ ಹೊರತಾಗಿ, ಮಂಗಳೂರು ಧರ್ಮಪ್ರಾಂತ್ಯವು ನ್ಯಾಯಯುತವಾಗಿ ವಿಚಾರಣೆಯನ್ನು ಸಹ ಪ್ರಾರಂಭಿಸುತ್ತದೆ” ಅವರು ಹೇಳಿದ್ದಾರೆ.



Join Whatsapp