ಮುಂಬೈ: ಚಲಾವಣೆಯಲ್ಲಿದ್ದ 2000 ರೂ ಮುಖಬೆಲೆಯ ನೋಟುಗಳ ಪೈಕಿ ಶೇ.97.62 ರಷ್ಟು ವಾಪಸ್ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿದೆ ಎಂದು ಆರ್ ಬಿಐ ಹೇಳಿದೆ. 8,470 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳು ವಾಪಸ್ ಬರಬೇಕಿದ್ದು, ಅವುಗಳು ಸಾರ್ವಜನಿಕರ ಬಳಿಯೇ ಇದೆ ಎಂದು ಬ್ಯಾಂಕ್ ಗಳ ನಿಯಂತ್ರಕ ಹೇಳಿದೆ.
2023 ರ ಮೇ.19 ರಂದು ಆರ್ ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಆರ್ ಬಿಐ ಚಲಾವಣೆಯಿಂದ ಹಿಂಪಡೆದಿತ್ತು.
2023 ರ ಮೇ.19 ರಂದು ಅಂತ್ಯಗೊಂಡ ವಹಿವಾಟಿನ ಅಂಕಿ-ಅಂಶಗಳ ಪ್ರಕಾರ, ಒಟ್ಟು ಚಲಾವಣೆಯಲ್ಲಿದ್ದ 2000 ರೂ ಮುಖಬೆಲೆಯ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಈ ಅಂಕಿ-ಅಂಶ ಫೆ.29 ರ ವೇಳೆಗೆ 8,470 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿತ್ತು ಎಂದು ಆರ್ ಬಿಐ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.