ಬಿಜೆಪಿ ನಮಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದೆ: ಕಾಂಗ್ರೆಸ್ ಸಂಸದೆ ಪ್ರತಿಭಾ ಸಿಂಗ್

Prasthutha|

ಶಿಮ್ಲಾ: ಬಿಜೆಪಿ ನಮಗಿಂತ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಂಸದೆ ಪ್ರತಿಭಾ ಸಿಂಗ್ ಹೇಳಿದ್ದಾರೆ.

- Advertisement -


ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಮಾಚಲಪ್ರದೇಶದಲ್ಲಿ ನಮಗಿಂತ ಬಿಜೆಪಿ ಉತ್ತಮ ಕೆಲಸಗಳನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಬಿಜೆಪಿಯು ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಕಾಂಗ್ರೆಸ್ ನಲ್ಲಿ ಬಹಳಷ್ಟು ಕೆಲಸಗಳು ಬಾಕಿ ಉಳಿದಿವೆ. ಬಿಜೆಪಿಯ ಕೆಲಸ ನಮಗಿಂತ ಉತ್ತಮವಾಗಿದೆ ಎಂಬುದು ನಿಜ ಎಂದು ಹೇಳಿದರು.


ಸಂಘಟನೆಯನ್ನು ಬಲಪಡಿಸಿದರೆ ಮಾತ್ರ ಮುಂಬರುವ ಚುನಾವಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ನಾನು ಮೊದಲ ದಿನದಿಂದಲೇ ಸಿಎಂಗೆ ಹೇಳುತ್ತಾ ಬಂದಿದ್ದೇನೆ. ಇದು ನಮಗೆ ತುಂಬಾ ಕಠಿಣ ಪರಿಸ್ಥಿತಿಯಾಗಿದೆ. ನಾವು ಪಕ್ಷವನ್ನು ಸಂಘಟಿಸಬೇಕಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಾಗಿದೆ ಎಂದರು.



Join Whatsapp