ಮಾಜಿ ಮಿಸ್ ಇಂಡಿಯಾ ಕ್ಯಾನ್ಸರ್ ಗೆ ಬಲಿ

Prasthutha|

ಅಗರ್ತಲಾ: ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತ್ರಿಪುರಾ ಮೂಲದ ಮಾಜಿ ಮಿಸ್ ಇಂಡಿಯಾ ತಾರೆ ರಿಂಕಿ ಚಕ್ಮಾ (28) ನಿಧನರಾಗಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕವು ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದ ಚಕ್ಮಾ ನಿಧನರಾಗಿದ್ದಾರೆ. ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ‘ಬ್ಯೂಟಿ ವಿತ್ ಎ ಪರ್ಪಸ್’ ಪ್ರಶಸ್ತಿಯನ್ನು ಗಳಿಸಿದ್ದರು.

- Advertisement -


‘ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ಸೂಚಿಸುತ್ತೇವೆ. ರಿಂಕಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ರಿಂಕಿ, ನಿಮ್ಮ ಉದ್ದೇಶ ಮತ್ತು ಸೌಂದರ್ಯದ ಪರಂಪರೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ’ ಎಂದು ಮಿಸ್ ಇಂಡಿಯಾ ಸಂಸ್ಥೆ ಪೋಸ್ಟ್ನಲ್ಲಿ ಬರೆದುಕೊಂಡಿದೆ.



Join Whatsapp