ಕೋಮು ದ್ವೇಷ ಪ್ರಸಾರ: Times Now, News 18, Aaj Takಗೆ ದಂಡ

Prasthutha|

ನವದೆಹಲಿ: ದ್ವೇಷ ಮತ್ತು ಕೋಮು ಸಾಮರಸ್ಯವನ್ನು ಕದಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಟೈಮ್ಸ್ ನೌ, ನವಭಾರತ್, ನ್ಯೂಸ್18 ಮತ್ತು ಆಚ್ ತಕ್ ಸುದ್ದಿ ಚಾನೆಲ್ಗಳಿಗೆ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಅಥಾರಿಟಿಯು (ಎನ್ಬಿಡಿಎಸ್ಎ) ದಂಡ ವಿಧಿಸಿದೆ.

- Advertisement -


ಟೈಮ್ಸ್ ನೌಗೆ 1 ಲಕ್ಷ ರೂ., ನ್ಯೂಸ್ 18ಗೆ 50,000 ರೂ. ದಂಡ ವಿಧಿಸಲಾಗಿದೆ. ಆಜ್ ತಕ್ ಗೆ ಎಚ್ಚರಿಕೆ ನೀಡಲಾಗಿದೆ. ಈ ಮೂರು ಚಾನೆಲ್ ಗಳು ಪ್ರಕಟಿಸಿದ್ದ ದ್ವೇಷ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯಕ್ರಮಗಳ ಆನ್ ಲೈನ್ ಆವೃತ್ತಿಗಳನ್ನು ಏಳು ದಿನಗಳಲ್ಲಿ ತೆಗೆದುಹಾಕಬೇಕೆಂದು ಎನ್ ಬಿಡಿಎಸ್ಎ ಮುಖ್ಯಸ್ಥ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಎ.ಕೆ ಸಿಕ್ರಿ ಆದೇಶಿಸಿದ್ದಾರೆ.


ಸಾಮಾಜಿಕ ಕಾರ್ಯಕರ್ತ ಇಂದ್ರಜೀತ್ ಘೋರ್ಪಡೆ ಅವರು ಕೋಮು ಮತ್ತು ಪ್ರಚೋದನಕಾರಿ ಪ್ರದರ್ಶನಗಳ ವಿರುದ್ಧ ಸಲ್ಲಿಸಿದ ದೂರುಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -


ಟೈಮ್ಸ್ ನೌ ಚಾನೆಲ್ನಲ್ಲಿ ನಿರೂಪಕ ಹಿಮಾಂಶು ದೀಕ್ಷಿತ್ ಅವರು ಮುಸ್ಲಿಮರನ್ನು ಸಮುದಾಯವಾಗಿ ಗುರಿಯಾಗಿಸಿಕೊಂಡಿದ್ದಾರೆ ಮತ್ತು ಅಂತರ್-ಧರ್ಮೀಯ ಸಂಬಂಧಗಳನ್ನು ‘ಲವ್ ಜಿಹಾದ್’ ಎಂದು ಕರೆದಿದ್ದಾರೆ. ಇದು ಮತ್ತೊಂದು ಕೋಮುವಿನ ವಿರುದ್ಧ ದ್ವೇಷ ಹರಡುತ್ತದೆ ಎಂದು ಹೇಳಿರುವ ಎನ್ ಬಿಡಿಎಸ್ ಎ, ಚಾನೆಲ್ ಗೆ ದಂಡ ವಿಧಿಸಿದೆ.


ನ್ಯೂಸ್ 18 ಇಂಡಿಯಾದಲ್ಲಿ ಪ್ರಸಾರವಾಗಿದ್ದ ಮೂರು ಶೋಗಳ ಕಾರಣಕ್ಕಾಗಿ ಸಂಸ್ಥೆಗೆ ದಂಡ ವಿಧಿಸಲಾಗಿದೆ. ಆ ಮೂರು ಕಾರ್ಯಕ್ರಮಗಳಲ್ಲಿ ಎರಡನ್ನು ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಿರೂಪಿಸಿದ್ದಾರೆ. ಈ ಪ್ರದರ್ಶನಗಳು ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಬಿಂಬಿಸಿವೆ. ಹೀಗಾಗಿ, 50,000 ರೂ. ದಂಡ ವಿಧಿಸಲಾಗಿದೆ.



Join Whatsapp