ನೆರವಿಗಾಗಿ ಕಾಯುತ್ತಿದ್ದವರನ್ನು ಕೊಂದು ಹಾಕಿದ ಇಸ್ರೇಲ್ ಪಡೆ

Prasthutha|

ಗಾಝಾ: ಗಾಝಾ ನಗರದ ಬಳಿ ನೆರವಿಗಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ಪಡೆ ಶೆಲ್ ದಾಳಿ ನಡೆಸಿದ್ದು, ಕನಿಷ್ಠ 104 ಪ್ಯಾಲೆಲೆಸ್ತೀನೀಯರು ಮೃತಪಟ್ಟಿದ್ದಾರೆ, 280 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯಾಧಿಕಾರಿಗಳು ಗುರುವಾರ ಹೇಳಿದ್ದಾರೆ.

- Advertisement -

ಉತ್ತರ ಗಾಝಾಪಟ್ಟಿಯ ಗಾಝಾ ನಗರದ ನಬುಲ್ಸಿ ವೃತ್ತದಲ್ಲಿ ಘಟನೆ ನಡೆದಿದೆ. ಗಾಯಗೊಂಡ ಹಲವರನ್ನು ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಝಾದ ಆರೋಗ್ಯ ಇಲಾಖೆಯ ವಕ್ತಾರ ಅಶ್ರಫ್ ಅಲ್-ಖಿದ್ರಾ ಹೇಳಿದ್ದಾರೆ. ಗಾಝಾ ಪಟ್ಟಿಯ ಕಮಲ್ ಅದ್ವನ್ ಆಸ್ಪತ್ರೆಗೆ 10 ಮೃತದೇಹಗಳನ್ನು ಮತ್ತು 15ಕ್ಕೂ ಅಧಿಕ ಗಾಯಾಳುಗಳನ್ನು ಸಾಗಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ನಬುಲ್ಸಿ ವೃತ್ತದಲ್ಲಿ ಆಹಾರದ ಟ್ರಕ್‌ಗಳಿಗಾಗಿ ಕಾಯುತ್ತಿದ್ದ ಜನರ ವಿರುದ್ಧ ಇಸ್ರೇಲಿ ಆಕ್ರಮಣ ಸೇನೆ ನಡೆಸಿದ ಹೀನ ಹತ್ಯಾಕಾಂಡ ಖಂಡನೀಯ ಎಂದು ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಕಚೇರಿ ಹೇಳಿದೆ.

- Advertisement -



Join Whatsapp