ನಾನು ರಾಜೀನಾಮೆ ನೀಡಿಲ್ಲ: ಹಿಮಾಚಲ ಸಿಎಂ ಸುಖು

Prasthutha|

ಶಿಮ್ಲಾ: ನಾನು ರಾಜೀನಾಮೆ ನೀಡಿಲ್ಲ, ನನ್ನ ಬಳಿ ರಾಜೀನಾಮೆ ನೀಡಿ ಎಂದು ಯಾರೂ ಕೇಳಿಲ್ಲ, ವದಂತಿಯನ್ನು ನಂಬಬೇಡಿ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

- Advertisement -


ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಆರು ಮಂದಿ ಶಾಸಕರು ಬಿಜೆಪಿಗೆ ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಉರುಳಲಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆ ಹಾಗೂ ಗಿರಿ ರಾಜ್ಯದ ಉನ್ನತ ನಾಯಕರಾದ ತನ್ನ ತಂದೆ ದಿ. ವೀರಭದ್ರ ಸಿಂಗ್ ಅವರಿಗೆ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿ ಸಚಿವ ವಿಕ್ರಮಾದಿತ್ಯ ಸಿಂಗ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.



Join Whatsapp