ಹರೇಕಳ : ತ್ವಾಹ ಜುಮಾ ಮಸ್ಜಿದ್ ರೌಲತುಲ್ ಉಲೂಮ್ ಮದ್ರಸ ಕಮಿಟಿ (ರಿ.) ನ್ಯೂಪಡ್ಪು ಹರೇಕಳ ಹಾಗು ಖಿದ್ಮತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಶನ್ (ಖಿಯಾ) ನ್ಯೂಪಡ್ಪು ಮತ್ತು ಮೆಡಿಸ್ಮಾರ್ಟ್ ಪೋಲಿಕ್ಲಿನಿಕ್ ಡಯಾಗ್ನೋಸ್ಟಿಕ್ ಸೆಂಟರ್ ಹಾಗು ಇಮೇಜ್ ಓಪ್ಟಿಕಲ್ಸ್ ಫರಂಗಿಪೇಟೆ ಇದರ ಜಂಟಿ ಆಶ್ರಯದಲ್ಲಿ ಮೆಡಿಕ್ಯಾಂಪ್ ಅರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಮತ್ತು ಕಣ್ಣಿನ ತಪಾಸಣೆ ಶಿಬಿರವು ಹರೇಕಳದ ಹೆಬ್ಬಾಗಿಲು ನ್ಯೂಪಡ್ಪುವಿನ ತ್ವಾಹ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ತ್ವಾಹ ಜುಮಾ ಮಸ್ಜಿದ್ ಇದರ ಆಡಳಿತ ಕಮಿಟಿ ಅಧ್ಯಕ್ಷರಾದ ಅಬ್ದುಲ್ ರಶೀದ್ ಹೆಚ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಖತೀಬ್ ಉಸ್ತಾದ್ ಝೈನುದ್ದೀನ್ ಸಖಾಫಿ ಉದ್ಘಾಟಿಸಿದರು. ರೌಲತುಲ್ ಉಲೂಮ್ ಮದ್ರಸ ನ್ಯೂಪಡ್ಪು ಇದರ ಪ್ರಧಾನ ಅಧ್ಯಾಪಕರಾದ ಉಬೈದುಲ್ಲಾ ಸಖಾಫಿ ಅಲ್ ಮುಹಿನಿ ದುವಾಕ್ಕೆ ನೇತೃತ್ವ ನೀಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಹರೇಕಳ ಹಾಜಬ್ಬ ಮತ್ತು ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಬುಲ್ ಬಶೀರ್ SM ಶುಭ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೆಡಿಸ್ಮಾರ್ಟ್ ಫರಂಗಿಪೇಟೆ ಇದರ ಖ್ಯಾತ ವೈದ್ಯರಾದ ಡಾಕ್ಟರ್! ಮುಹಮ್ಮದ್ ರವರು ಆರೋಗ್ಯದ ಕಾಳಜಿಯ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಇಮೇಜ್ ಓಪ್ಟಿಕಲ್ಸ್ ಇದರ ವ್ಯವಸ್ಥಾಪಕರಾದ ಕೆ ಎಂ ಸಜ್ಜಾದ್, ಉಸ್ತಾದ್ ಜಾಬಿರ್ ಜೌಹರಿ, ರಫೀಕ್ ಸಖಾಫಿ, ಟಿ ಜೆ ಎಮ್ ನ್ಯೂಪಡ್ಪು ಇದರ ಕೋಶಾಧಿಕಾರಿ ಆರೀಸ್ ಝೋಯಾ, ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್, ಉಸ್ಮಾನ್, ಖಿಯಾ ನ್ಯೂಪಡ್ಪು ಇದರ ಅಧ್ಯಕ್ಷರಾದ ಅನ್ವರ್ ಬಿ, ಉಪಾಧ್ಯಕ್ಷ ಸಿದ್ದೀಕ್, ಪ್ರ.ಕಾರ್ಯದರ್ಶಿ ಮುಬಾರಕ್, ಮದ್ರಸ ಸಲಹಾ ಸಮಿತಿ ಉಸ್ತುವಾರಿ ಜಮಾಲ್ ಅಹ್ಮದ್, ಟಿ ಜೆ ಎಂ ಗಲ್ಫ್ ಸಮಿತಿ ಸದಸ್ಯರಾದ ನಾಸೀರ್, SKSSF ನ್ಯೂಪಡ್ಪು ಶಾಖಾಧ್ಯಕ್ಷ ಇಲ್ಯಾಸ್, ಆಡಳಿತ ಕಮಿಟಿ ಸದಸ್ಯರಾದ ಇಕ್ಬಾಲ್ M H, ಅಝೀಜ್, ಉಮರಬ್ಬ ಕೆ, ಕೇಬಿರ್, ಖಿಯಾ ಕಮಿಟಿ ಸದಸ್ಯರು ಜಮಾಅತ್ ಮೊಹಲ್ಲಾದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಿಬಿರದಲ್ಲಿಊರ-ಪರವೂರ ಹಿರಿಯರು, ಯುವಕರು, ಮಕ್ಕಳು, ಹಾಗು ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ರಕ್ತ ಪರೀಕ್ಷೆ ಮತ್ತು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ತ್ವಾಹ ಜುಮಾ ಮಸ್ಜಿದ್ ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಸೀಫ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ದನ್ಯವಾದಗೈದರು.