ಹರಿಯಾಣ: INLD ಪಕ್ಷದ ರಾಜ್ಯಾಧ್ಯಕ್ಷ ಸೇರಿ ನಾಲ್ವರನ್ನು ಗುಂಡು ಹಾರಿಸಿ ಹತ್ಯೆ

Prasthutha|

ಹರಿಯಾಣ: ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ರಾಜ್ಯ ಘಟಕದ ಮುಖ್ಯಸ್ಥ, ಮಾಜಿ ಶಾಸಕ ನಫೆ ಸಿಂಗ್ ರಾಠಿ ಮತ್ತು ಪಕ್ಷದ 3 ಕಾರ್ಯಕರ್ತನನ್ನು ರಾಜ್ಯದ ಝಜ್ಜರ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಭಾನುವಾರ ತಿಳಿಸಿದ್ದಾರೆಂದು ವರದಿಯಾಗಿದೆ.

- Advertisement -

ನಫೆ ಸಿಂಗ್ ರಾಠಿ ಪ್ರಯಾಣಿಸುತ್ತಿದ್ದಾಗ ಝಜ್ಜರ್‌ನ ಬಹದ್ದೂರ್ಗಢ ಪಟ್ಟಣದಲ್ಲಿ ಅವರ ಎಸ್ಯುವಿ ಮೇಲೆ ಗುಂಡುಗಳನ್ನು ಹಾರಿಸಲಾಗಿದೆ. ಭದ್ರತೆಗಾಗಿ ರಾಠಿ ನೇಮಿಸಿಕೊಂಡ ಮೂವರು ಖಾಸಗಿ ಬಂದೂಕುಧಾರಿಗಳು ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಠಿ ಅವರ ಜೀವಕ್ಕೆ ಬೆದರಿಕೆ ಇದ್ದರೂ ಅವರಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಐಎನ್‌ಎಲ್ಡಿ ನಾಯಕ ಅಭಯ್ ಚೌಟಾಲಾ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜ್ಯ ಗೃಹ ಸಚಿವ ಅನಿಲ್ ವಿಜ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

- Advertisement -

ನಮ್ಮ ರಾಜ್ಯ ಘಟಕದ ಮುಖ್ಯಸ್ಥರಾಗಿರುವ ಮತ್ತು ಎರಡು ಬಾರಿ ಶಾಸಕರಾಗಿರುವ ಅವರಿಗೆ ಭದ್ರತೆ ಒದಗಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.



Join Whatsapp